-->
Shailaja Dropped from cabinet- ಪಿಣರಾಯಿ ಕ್ಯಾಬಿನೆಟ್ ಅಚ್ಚರಿ; ವಿಶ್ವಖ್ಯಾತಿ ಮಿನಿಸ್ಟರ್‌ಗೆ ಖೊಕ್, ಯುವಕರಿಗೆ ಮಣೆ

Shailaja Dropped from cabinet- ಪಿಣರಾಯಿ ಕ್ಯಾಬಿನೆಟ್ ಅಚ್ಚರಿ; ವಿಶ್ವಖ್ಯಾತಿ ಮಿನಿಸ್ಟರ್‌ಗೆ ಖೊಕ್, ಯುವಕರಿಗೆ ಮಣೆ

ಪಿಣರಾಯಿ ಕ್ಯಾಬಿನೆಟ್ ಅಚ್ಚರಿ; ವಿಶ್ವಖ್ಯಾತಿ ಮಿನಿಸ್ಟರ್‌ಗೆ ಖೊಕ್, ಯುವಕರಿಗೆ ಮಣೆ

ಕೇರಳ ಸರ್ಕಾರದಲ್ಲಿ ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿಭಾಯಿಸಿ ವಿಶ್ವದಲ್ಲೇ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದ ಶೈಲಜಾ ಅವರನ್ನು ಸಂಪುಟದಿಂದ ಕೈಬಿಡುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ.ಕೇರಳದಲ್ಲಿ ಎಡ ರಂಗ ಸಂಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬಂದಿದ್ದು, ಇದಕ್ಕೆ ಕೋವಿಡ್ ಯಶಸ್ವೀ ನಿರ್ವಹಣೆಯೂ ಒಂದು ಮಹತ್ವದ ಕಾರಣವಾಗಿತ್ತು. ಆದರೆ, ಪ್ರಮಾಣ ವಚನಕ್ಕೆ ಎರಡು ದಿನಗಳು ಇರುವಾಗಲೇ ಈ ವಿಷಯ ಹೊರಬಿದ್ದಿದೆ.ಸಿಎಂ ಪಿಣರಾಯಿ ವಿಜಯನ್ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ. ಶೈಲಜಾ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 60 ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿದ್ದರು.


ವಿಶ್ವಸಂಸ್ಥೆಯಿಂದ ಹಿಡಿದು ಜಗತ್ತಿನ ಹಲವು ಪ್ರಮುಖ ಗಣ್ಯರಿಂದ ಕೊರೋನಾ ನಿಭಾಯಿಸಿದ ರೀತಿಯಲ್ಲಿ ಮೆಚ್ಚುಗೆಗೆ ಕೈಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಶೈಲಜಾ ಅವರನ್ನು ಕೈಬಿಟ್ಟು ಸಿಪಿಎಂ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ.ಅಷ್ಟೇ ಅಲ್ಲ, ಕಳೆದ ಬಾರಿಯ ಎಲ್ಲ ಸಚಿವರನ್ನೂ ಕೈಬಿಡಲಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಹೇಳಿದೆ.ಎಂ.ಬಿ. ರಾಜೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಿದೆ. ಸರ್ಕಾರದ ಮುಖ್ಯ ಸಚೇತಕರನ್ನಾಗಿ ಶೈಲಜಾ ಅವರನ್ನು ನೇಮಿಸಲಾಗಿದೆ.ಟಿ.ಪಿ. ರಾಮಕೃಷ್ಣನ್ ಅವರನ್ನು ಶಾಸಕಾಂಗ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಪಿಣರಾಯಿ ವಿಜಯನ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹಾಗೂ ಮುಖ್ಯಮಂತ್ರಿಯಾಗಿ ಮುಂದುವರಿಸಲಾಗಿದೆ. ಎಂ.ವಿ. ಗೋವಿಂದನ್, ಕೆ. ರಾಧಾಕೃಷ್ಣನ್, ಕೆ.ಎನ್. ಬಾಲಗೋಪಾಲ್, ಪಿ. ರಾಜೀವ್, ವಿ.ಎನ್. ವಾಸವನ್, ಸಾಜಿ ಚೆರಿಯನ್, ವಿ. ಶಿವಂ ಕುಟ್ಟಿ, ಮಹಮ್ಮದ್ ರಿಯಾಜ್, ಡಾ. ಆರ್. ಬಿಂದು, ವೀಣಾ ಜಾರ್ಜ್ ಹಾಗೂ ವಿ. ಅಬ್ದುಲ್ ರೆಹ್ಮನ್ ಅವರು ಪಿಣರಾಯಿ ಸರ್ಕಾರದ ನೂತನ ಸಚಿವರಾಗಿದ್ದಾರೆ.
ಶೈಲಜಾ ಅವರನ್ನು ಹೊರಗಿಟ್ಟ ಬಗ್ಗೆ ಶಾಸಕ ಶಂಶೀರ್ ಪ್ರತಿಕ್ರಿಯೆ ನೀಡಿದ್ದು, ಇದು ನಮ್ಮ ಪಕ್ಷದ ನಾಯಕರು ಕೈಗೊಂಡಿರುವ ನಿರ್ಧಾರ. ಪಿಣರಾಯಿ ವಿಜಯನ್ ಹೊರತುಪಡಿಸಿ ಹಿಂದಿನ ಬೇರ ಯಾವ ಸಚಿವರೂ ಹೊಸ ಸರ್ಕಾರದಲ್ಲಿ ಇಲ್ಲ. ಇದು ಯುವಕರು ಮತ್ತು ಹಿರಿಯ ಮಿಶ್ರಣವಾಗಿದೆ ಎಂದು ವಿವರಿಸಿದ್ದಾರೆ.ಎಲ್‌ಡಿಎಫ್‌ ವಕ್ತಾರ ಎ.ವಿಜಯ ರಾಘವನ್, ಈ ಮಾಹಿತಿ ನೀಡಿದ್ದು, ಮೇ 20ರಂದು ಪಿಣರಾಯಿ ವಿಜಯನ್ ಸಹಿತ 21 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಇದರಲ್ಲಿ 12 ಜನ ಸಿಪಿಐಎಂ, ನಾಲ್ವರು ಸಿಪಿಐ, ಕೇರಳ ಕಾಂಗ್ರೆಸ್‌(ಎಂ), ಜೆಡಿಎಸ್ ಹಾಘೂ ಎನ್‌ಸಿಪಿಯ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ಧಾರೆ.

Ads on article

Advertise in articles 1

advertising articles 2

Advertise under the article

holige copy 1.jpg