ಉಪ್ಪಿನಂಗಡಿ: ವಿದ್ಯುತ್ ಕಂಬದಲ್ಲಿ ಕರೆಂಟ್ ಪೂರೈಕೆಯಲ್ಲಿ ವ್ಯತ್ಯಯದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಪವರ್ ಮ್ಯಾನ್‌ನ್ನು ಕಲ್ಲೇರಿ ಸೆಕ್ಷನ್ ಆಫೀಸ್‌ನಲ್ಲಿ ಕರ್ತವ್ಯ ನಿರತ ವಿಕಾಸ್ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮ ವ್ಯಾಪ್ತಿಯ ಪಿಂಡಿಕಲ್ಲು ಎಂಬ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಭಾರೀ ಗಾಳಿ-ಮಳೆ ಹಿನ್ನೆಲೆಯಲ್ಲಿ ಇಲ್ಲಿ ವಿದ್ಯುತ್ ಅಡಚಣೆ ಉಂಟಾಗಿತ್ತು.
ಈ ವಿದ್ಯುತ್ ವ್ಯತ್ಯಯವನ್ನು ಸರಿಪಡಿಸಿ ವಿದ್ಯುತ್ ಪೂರೈಕೆಯನ್ನು ಪುನಸ್ಥಾಪಿಸುವ ಸಂದರ್ಭದಲ್ಲಿ ಕರ್ತವ್ಯ ನಿರತ ವಿಕಾಸ್ ಬಲಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 
 
 
 
 
 
 
 
 
 
 
 
 
 
 
 
 
 
