-->
Postal Agitation against Lockdown | ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ವೈಫಲ್ಯ: ಡಿವೈಎಫ್ಐ ನಿಂದ ಪೋಸ್ಟರ್ ಚಳುವಳಿ

Postal Agitation against Lockdown | ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ವೈಫಲ್ಯ: ಡಿವೈಎಫ್ಐ ನಿಂದ ಪೋಸ್ಟರ್ ಚಳುವಳಿ

ವಿಟ್ಲ : ಕೊರೋನಾ ನಿಯಂತ್ರಿಸುವಲ್ಲಿ ಮತ್ತು ಜನತೆಗೆ ಪರಿಹಾರ ಒದಗಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವೈಪಲ್ಯ ಖಂಡಿಸಿ,‌ ಆಕ್ಸಿಜನ್ ವೆಂಟಿಲೇಟರ್ ಹಾಗೂ ಬೆಡ್ ಒದಗಿಸಲು ಒತ್ತಾಯಿಸಿ, ಆರೋಗ್ಯ ವ್ಯವಸ್ಥೆ ಯನ್ನು ರಾಷ್ಟೀಕರಣ ಮಾಡುವಂತೆ ಒತ್ತಾಯಿಸಿ ಡಿವೈಎಫ್ಐ ವಿಟ್ಲ ವಲಯ ಸಮಿತಿ ವತಿಯಿಂದ ಮನೆ ಮುಂಭಾಗ ಪೋಸ್ಟರ್ ಚಳುವಳಿ ಅಭಿಯಾನ ನಡೆಸಲಾಯಿತು.


ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೊರೋನಾ ವನ್ನು ನಿಯಂತ್ರಿಸಲು ಸಂಪೂರ್ಣ ವಾಗಿ ವಿಫಲವಾಗಿದ್ದು, ಲಾಕ್ ಡೌನ್ ಹೆಸರಿನಲ್ಲಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜನರಿಗೆ ಲಾಕ್ ಡೌನ್ ನಲ್ಲಿ ಯಾವುದೇ ಪರಿಹಾರವನ್ನು ಕೂಡಾ ಘೋಷಿಸದೆ ಜನರು ಕಷ್ಟಪಡುವ ಪರಿಸ್ಥಿತಿ ಉಂಟಾಗಿದ್ದು, ವಿವಿಧ ವಿಭಾಗಗಳಲ್ಲಿ ದುಡಿಯುವ ಜನ ಕೆಲಸವಿಲ್ಲದೆ ಕಂಗಾಲಾಗಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೂಡಲೇ ಜನತೆಗೆ ಪರಿಹಾರ ಒದಗಿಸಬೇಕು ಹಾಗೂ ಕೇರಳ ಮಾದರಿಯಲ್ಲಿ ಉಚಿತ ರೇಷನ್ ನೀಡಬೇಕು ಎಂದು ಪೋಸ್ಟರ್ ಚಳವಳಿಯಲ್ಲಿ ಒತ್ತಾಯಿಸಲಾಯಿತು.


ರಾಜ್ಯ ಸರಕಾರದ ಮಂತ್ರಿಗಳು ಕೊರೋನಾದ ಈ ಸಂಧರ್ಭದಲ್ಲಿ ಕೂಡಾ ಭ್ರಷ್ಟಾಚಾರದಲ್ಲಿ ತೊಡಗಿದ್ದು ತಕ್ಷಣ, ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ತಕ್ಷಣ ರಾಜೀನಾಮೆ ನೀಡಬೇಕು, ದಿನಕ್ಕೊಂದು ಮಾರ್ಗಸೂಚಿ ಪ್ರಕಟಿಸಿ ಜನರಲ್ಲಿ ಗೊಂದಲ ಉಂಟುಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.


ಡಿವೈಎಫ್ಐ ವಿಟ್ಲ ವಲಯ ಸಮಿತಿ ವತಿಯಿಂದ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮುಂದೆ ಪೋಸ್ಟರ್ ಚಳುವಳಿ ನಡೆಸಲಾಯಿತು. ಪೋಸ್ಟರ್ ಚಳುವಳಿಯಲ್ಲಿ ಡಿವೈಎಫ್ಐ ವಿಟ್ಲ ವಲಯ ಸಮಿತಿಯ ಮುಖಂಡರುಗಳು‌ ಹಾಗೂ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ‌ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article

holige copy 1.jpg