ಮಂಗಳೂರಿನ ಟಿಂ-ಬಿ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ ಕೊಡುಗೆ
ಪುತ್ತೂರು ಸರಕಾರಿ ಆಸ್ಪತ್ರೆಗೆ 6 ಆಕ್ಸಿಜನ್ ಸಿಲಿಂಡರ್ ಕೊಡುಗೆ
ಮಂಗಳೂರಿನ ಟಿಂ-ಬಿ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ ಕೊಡುಗೆಯ 6 ಆಕ್ಸಿಜನ್ ಜಂಬೊ ಸಿಲಂಡರನ್ನು ಪುತ್ತೂರು ಶಾಸಕರ ಕೋವಿಡ್ ವಾರ್ ರೂಂ ಮೂಲಕ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರ್ ಅವರಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೊಕೇಶ್, ಮತ್ತು ಉದ್ಯಮಿ ಹಾರಿಸ್ ಪರ್ಲಡ್ಕರವರು ಸಿಲಿಂಡರ್ ಹಸ್ತಂತರಿಸಿದರು.
ಶಾಸಕರ ಕೋವಿಡ್ ವಾರ್ ರೂಂ ನ ಕ್ಷಿಪ್ರ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ಪ್ರೋತ್ಸಾಹಿಸಲು ಅಗತ್ಯ ಇದ್ದರೆ ಇನ್ನಷ್ಟೂ ಸಹಕಾರವನ್ನು ನೀಡಲು ಸಿದ್ದ ಎಂದು ಉದ್ಯಮಿ ಹ್ಯಾರಿಸ್ ಪರ್ಲಡ್ಕ ತಿಳಿಸಿದರು.
ಪ್ರತೀ ದಿನವು ಒಂದು ಜಂಬೊ ಸಿಲಿಂಡರಿನಲ್ಲಿ ಸುಮಾರು 5 ರೋಗಿಗಳು ಉಪಯೋಗಿಸ ಬಹುದಾದ, ಒಟ್ಟು ಈ 6 ಜಂಬೊ ಆಕ್ಸಿಜನ್ ಸಿಲಂಡರ್, ಶಾಸಕರ ವಾರ್ ರೂಂ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವುದು ಉತ್ತಮ ನಿರ್ಧಾರ ಎಂದು ಶಾಸಕರಾದ ಸಂಜೀವ ಮಠಂದೂರ್ ಅಭಿಪ್ರಾಯ ಪಟ್ಟರು. ಟೀಂ- ಬಿ ಹ್ಯೂಮನ್ ಮೂಲಕ ಆಸಿಫ್ ಡೀಲ್ಸ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಬಹಳ ಅನಿವಾರ್ಯ ಸಮಯದಲ್ಲಿ ಸಂಸ್ಥೆಯ ಈ ಸೇವೆಯನ್ನು ಅಭಿನಂದಿಸಿದರು.
ಹ್ಯೂಮನ್ ಅಂದರೆ ಮಾನವೀಯತೆ. ಟೀಂ ಅಂದರೆ ತಂಡ. ಮಾನವೀಯತೆಯೊಂದಿಗೆ ತಂಡವಾಗಿ ಕಾರ್ಯಾಚರಿಸಿದರೆ ಕೊರೊನಾವನ್ನು ಸೋಲಿಸಬಹುದು ಎಂದ ಶಾಸಕರು ಕೋವಿಡನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಕಾರ -ಸಂಘಸಂಸ್ಥೆ ಮತ್ತು ಜನರು ಸಮಾನ ಸಹಭಾಗಿಗಳು ಆಗಬೇಕು. ಈಗಾಗಲೇ ಟೀಂ-ಬಿ ಹ್ಯೂಮನ್ ಮತ್ತು ಕಮ್ಯೂನಿಟಿ ಸೆಂಟರ್ ನವರು, ಒಂದು ಲಕ್ಷ ಹತ್ತು ಸಾವಿರ ಮೌಲ್ಯದ ಸುಮಾರು ಆರು ಆಕ್ಸಿಜನ್ ಸಿಲೀಂಡರನ್ನು ಸರಕಾರಿ ಆಸ್ಪತ್ರೆಗೆ ನೀಡಿದ್ದಾರೆ.
ಈ ರೀತಿಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಸಹಕರಿಸಿ ನಾಡಿಗೆ ವಕ್ಕರಿಸಿದ ಈ ಮಹಾಮಾರಿಯನ್ನು ನಿವಾರಿಸಲು ಪ್ರಯತ್ನಿಸಬೇಕು. ಈಗಾಗಲೇ ವಾರ್ ರೂಂ ಮೂಲಕ ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಶಾಸಕರಾದ ಸಂಜೀವ ಮಠಂದೂರ್ ಅವರು ವಿನಂತಿಸಿದರು.
ಶಾಸಕರ ವಾರ್ ರೂಂ ಕಾರ್ಯಾಚರಣೆಗೆ ಶ್ಲಾಘನೆ
ರಾಜ್ಯದಾದ್ಯಂತ ಅನಿಯಂತ್ರಿತ ಕೋವಿಡ್ ದಾಳಿ ಮತ್ತು ದುಸ್ಥಿತಿಯ ನಡುವೆಯೂ ಪುತ್ತೂರು ತಾಲೂಕಿನಲ್ಲಿ ಶಾಸಕರಾದ ಶ್ರೀ ಸಂಜೀವ ಮಠಂದೂರ್ ಅವರ ನೇತೃತ್ವದಲ್ಲಿ ಪರಿಣಾಮಕಾರಿ ಮತ್ತು ವ್ಯವಸ್ಥಿತವಾಗಿ ಕೋವಿಡ್ ವಾರ್ ರೂಂ ಕಾರ್ಯಾಚರಿಸುತ್ತಿದೆ.
ಹಲವು ಪಟ್ಟಣ ಮತ್ತು ಗ್ರಾಮಗಳನ್ನು ಒಳಗೊಂಡ ಪುತ್ತೂರು ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ಶಾಸಕರು ತನ್ನ ತಂಡದ ಮೂಲಕ ಮುಂಜಾಗರೂಕತೆಯ ಕ್ರಮಗಳನ್ನು ಅನುಸರಿಸಿದ್ದು ಈಗ ಅದು ಹೆಚ್ಚು ಉಪಕಾರಿಯಾಗಿದೆ. ಕೋವಿಡ್ ವಾರ್ ರೂಂ ನ ತಂಡವು ತಾಲೂಕಿನ ಯಾವುದೇ ಭಾಗದಲ್ಲೂ ಕ್ಷಿಪ್ರ ಕಾರ್ಯಾಚರಣೆ ಮಾಡಿ ರೋಗಿಗಳೊಂದಿಗೆ ಮತ್ತು ಸಂಕಷ್ಠಿತರೊಂದಿಗೆ ಸ್ಪಂದಿಸುವ ತುರ್ತು ಸೇವೆಯನ್ನೂ ನೀಡುವಲ್ಲಿ ಸನ್ನದ್ದವಾಗಿದೆ.
ಈಗಾಗಲೇ, ಮಾಹಿತಿ ಕೇಂದ್ರ, ಆಸ್ಪತ್ರೆ ಸೌಲಭ್ಯ, ಆಂಬುಲೆಂನ್ಸ್ , ವೆಂಟಿಲೇಟರ್, ವ್ಯಾಕ್ಸಿನೇಶನ್ ಮತ್ತು ಐಸಿಯೂ, ಔಷಧಿ ಪೂರೈಕೆ, ಆಯುಷ್ಮಾನ್ ಭಾರತ್, ಅಂತ್ಯ ಸಂಸ್ಕಾರ ಮತ್ತು ತುರ್ತು ಸೇವೆಗಾಗಿಯೇ ಟೀಂ ಲೀಡರ್ ಇರುವ ವಿಭಾಗಗಳನ್ನು ರೂಪಿಸಲಾಗಿದೆ. ಪ್ರತೀ ತಂಡದ ದೂರವಾಣಿ ಸಂಖ್ಯೆಯ ಜೊತೆ ಜನರಿಗೆ ಅದರ ಕುರಿತು ಮಾಹಿತಿ ತಿಳಿಯುವಂತೆ ಪ್ರಚಾರವನ್ನೂ ಮಾಡಲಾಗಿದೆ. ಸರಕಾರಿ ಆಸ್ಪತ್ರೆಯ ನಂತರ ರೋಗಿಗಳ ಚಿಕಿತ್ಸೆಗಾಗಿ ಕೋವಿಡ್ ಸೆಂಟರನ್ನು ತೆರೆಯಲಾಗಿದೆ. ಈಗಾಗಲೇ ಹಲವು ಶಾಲೆ ಮತ್ತು ಖಾಸಗಿ ಆಸ್ಪತ್ರೆಯ ಸಹಯೋಗವನ್ನೂ ಇದಕ್ಕೆ ಪಡೆಯಲಾಗಿದೆ.
ಶಾಸಕರು ದಿನದ 24 ಗಂಟೆಯೂ ಯಾವುದೇ ಕ್ಷಣದಲ್ಲೂ ಲಭ್ಯ ಇರುತ್ತಾರೆ. ಶಾಸಕರ ಈ ಅವಿರತ ಮತ್ತು ಕಾಳಜಿಯ ಪ್ರಯತ್ನಕ್ಕೆ ನಮ್ಮಿಂದಾದ ಸಹಕಾರ ಕೊಡಲು ಮಂಗಳೂರಿನ ಟೀಂ -ಬಿ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ ಈ ಆಕ್ಸಿಜನ್ ಸಿಲೀಂಡರ್ ನೀಡಿದೆ. ಅಗತ್ಯ ಇದ್ದಲ್ಲಿ ಮುಂದೆ ಇನ್ನಷ್ಟೂ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಕಮ್ಯೂನಿಟಿ ಸೆಂಟರ್ ನ ಮುಖ್ಯಸ್ಥರಾದ ಹನೀಫ್ ಪುತ್ತೂರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಆಶಾ ಜ್ಯೋತಿ, ನಗರಸಭಾ ಅಧ್ಯಕ್ಷ ಜೀವಂದರ್ ಜೈನ್, ನಗರ ಸಭಾ ಉಪಾಧ್ಯಕ್ಷ ವಿದ್ಯಾ ಗೌರಿ, ಪೂಡ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವ. ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಫೀಕ್ ದರ್ಭೆ,
ಟೀಂ-ಬಿ ಹ್ಯೂಮನ್ ನ ಪುತ್ತೂರು ತಾಲೂಕು ಅಧ್ಯಕ್ಷರಾದ ಇಮ್ತಿಯಾಝ್ ಪಾರ್ಲೆ, ಕಮ್ಯೂನಿಟಿ ಸೆಂಟರ್ ನ ಮಹಮ್ಮದ್ ತೌಫೀಕ್, ಮುಝಮ್ಮಿಲ್ ಚಾಯ್ಸ್ ಭಾಗವಹಿಸಿದ್ದರು.
