-->

NSUI demands vaccination for students- ಲಸಿಕೆ ಫಸ್ಟ್, ಪರೀಕ್ಷೆ ನೆಕ್ಸ್ಟ್: ಎನ್‌ಎಸ್‌ಯುಐ

NSUI demands vaccination for students- ಲಸಿಕೆ ಫಸ್ಟ್, ಪರೀಕ್ಷೆ ನೆಕ್ಸ್ಟ್: ಎನ್‌ಎಸ್‌ಯುಐ





ಮಂಗಳೂರು: ಲಸಿಕೆ ಇಲ್ಲದೇ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು ಹಾಗೂ ಕೊರೋನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಬೇಕು ಎಂದು ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.




ಗುರುವಾರ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಕೊರೋನಾ ಮೂರನೇ ಅಲೆಯ ಮುನ್ಸೂಚನೆ ಇದ್ದು, ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಭಯವನ್ನುಂಟು ಮಾಡಿದೆ. ಇದರ ನಡುವೆ ಪರೀಕ್ಷೆಯನ್ನು ಮಾಡುವುದಾರೆ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ ವ್ಯಾಕ್ಸಿನನ್ನು ನೀಡಬೇಕು ಅಥವಾ ಪರೀಕ್ಷೆಯನ್ನೇ ರದ್ದುಗೊಳಿಸಬೇಕು. ಸತತವಾಗಿ ಒಂದು ವರ್ಷದಿಂದ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು. ಲಾಕ್ ಡೌನ್ ಆಗಿರಬಹುದು, ಸಾಕಷ್ಟು ಕಾಲೇಜುಗಳು ಬಂದಾಗಿರುವುದರಿಂದ ಸರ್ಕಾರದಿಂದ ಸಿಗಬೇಕಾಗಿದ್ದ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ ವಿದ್ಯಾರ್ಥಿಗಳಿಗೆ ಲಭಿಸಿಲ್ಲ.


 ಕೇವಲ ಆನ್ ಲೈನ್ ತರಗತಿ ಮುಖಾಂತರ ಕ್ಲಾಸ್ ಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಶುಲ್ಕದಲ್ಲಿ ಯಾವುದೇ ರಿಯಾಯಿತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಲಿಲ್ಲ. ಆದ್ದರಿಂದ ಪೂರ್ಣ ಪ್ರಮಾಣದ ಶುಲ್ಕವನ್ನು ಪಾವತಿಸಲು ಪೋಷಕರಿಗೆ ತೊಂದರೆಯಾಗಲಿದ್ದು, ವಿದ್ಯಾರ್ಥಿ ಶುಲ್ಕದಲ್ಲಿ ಶೇ..50 ರಷ್ಟು ರಿಯಾಯಿತಿ ನೀಡಬೇಕು ಅಲ್ಲದೆ, ಕೋವಿಡ್ 19 ನಿಂದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಆಧಾರ ಸ್ತಂಭವಾದ ಪೋಷಕರು, ಕುಟುಂಬಸ್ಥರನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಅವರ ಮುಂದಿನ ಸಂಪೂರ್ಣ ಶಿಕ್ಷಣವನ್ನು ಸರಕಾರ ವಹಿಸಿಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳ ಕೆಜಿ-ಪಿಜಿ ವರೆಗಿನ ಶಿಕ್ಷಣವನ್ನು ಸರಕಾರ ಭರಿಸಬೇಕು ಎಂದು ಒತ್ತಾಯಿಸಿದರು.



ವಿಟಿಯು ಉಸ್ತುವಾರಿ ಅನ್ವೀತ್ ಕಟೀಲ್ ಮಾತನಾಡಿ, ಆಫ್ ಲೈನ್ ಪರೀಕ್ಷೆ ಮಾಡುವ ಮೊದಲು ಆಫ್ ಲೈನ್ ತರಗತಿಗಳನ್ನು 45 ದಿನಗಳ ಕಾಲ ನಡೆಸಬೇಕು. ಆನ್ಲೈನ್ ನಲ್ಲಿ ಶಿಕ್ಷಣ ಕೊಟ್ಟು ಆಫ್ಲೈನ್ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ವ್ಯತ್ಯಾಸ ಆಗುತ್ತಿದೆ. ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. 



ಇಂತಹ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ತುಂಬಾ ನೋವುಂಟು ಮಾಡಿದೆ. ಆದುದರಿಂದ ವಿದ್ಯಾರ್ಥಿಗಳು ಕ್ಯಾರಿ ಓವರ್ ಪದ್ಧತಿಯನ್ನು ಕೇಳುತ್ತಿದ್ದಾರೆ. ಹಿಂದಿನ ಸೆಮಿಸ್ಟರ್ ಪರೀಕ್ಷೆ ಇನ್ನು ಮುಗಿದಿಲ್ಲ ಆದರೆ ಕಾಲೇಜುಗಳು ಮುಂದಿನ ಸೆಮಿಸ್ಟರ್ ತರಗತಿಗಳ್ಳನ್ನು ಆನ್ಲೈನ್ ಮೂಲಕ ಪ್ರಾರಂಭ ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿ ಒಂದೇ ಸೆಮಿಸ್ಟರ್ ನಲ್ಲಿ ಎಲ್ಲಾ ಸಬ್ಜೆಕ್ಟ್ ಗಳನ್ನು ಓದುವುದು ಹೇಗೆ ಎಂದು ಪ್ರಶ್ನಿಸಿದರು.




ಈ ಸಂದರ್ಭದಲ್ಲಿ ಜಿಲ್ಲಾ ಎನ್ ಎಸ್ ಯುಐ ಉಪಾಧ್ಯಕ್ಷರಾದ ಆಸ್ಟನ್ ಸ್ವಿಕ್ವೇರಾ, ಅಂಕುಶ್ ಶೆಟ್ಟಿ, ನಿಕಿಲ್ ಪೂಜಾರಿ, ಮುಖಂಡರಾದ ಪವನ್ ಸಾಲ್ಯಾನ್, ಶಫೀಕ್, ರಿಲ್ವಾನ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article