ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕೊರೊನಾ ಸಂಕಷ್ಟ ನಿವಾರಣೆಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಕೊನೆಯ ದಿನಗಳಲ್ಲಿ ಹೋಮಗಳು ನಡೆಯಲಿದೆ.
ದೇಶದಲ್ಲಿ ಕೊರೋನಾ ಮಾಹಾಮಾರಿ ನಿಯಂತ್ರಣಕ್ಕೆ ಬರಬೇಕೆಂಬ ಸಂಕಲ್ಪದೊಂದಿಗೆ ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಯನ್ನು ದೇಗುಲದ ಅರ್ಚಕರ ನೇತೃತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರಂಭಿಸಲಾಗಿದೆ.
ಶ್ರೀ ಧನ್ವಂತರಿ ಜಪ ಮತ್ತು ಕ್ರಿಮಿಹರ ಸೂಕ್ತ ಜಪ ಸಹಿತ ಹೋಮ ನೆರವೇರಿಸಲಾಗುತ್ತಿದ್ದು, ಇದು ಮೇ.4 ರಿಂದ ಮೇ.13 ರ ವರೆಗೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ರವರು ಕರ್ನಾಟಕ ಧಾರ್ಮಿಕ ಧತ್ತಿ ಇಲಾಖೆ ಮತ್ತು ದೇವಸ್ಥಾನದ ವ್ಯವಸ್ಧಾಪನಾ ಸಮಿತಿಯ ಅನುಮತಿ ಪಡೆದು, ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಈ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಯಾವುದೇ ರೀತಿಯಲ್ಲಿ ಹೊರಗಿನ ಜನರಿಗೆ ಈ ವಿಶೇಷ ಪೂಜೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿಲ್ಲ.ದೇವಸ್ಥಾನದ ಅರ್ಚಕರು ಹಾಗೂ ಸಹ ಕರ್ಮಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಮೇ 12 ನೇ ತಾರೀಕಿನಂದು ಧನ್ವಂತರಿ ಹೋಮ ಮತ್ತು ಮೆ.13ನೇ ತಾರೀಕಿನಂದು ಕ್ರಿಮಿಹರ ಸೂಕ್ತ ಹೋಮ ನೆರವೇರಲಿದೆ. ಉಳಿದ ದಿನಗಳಲ್ಲಿ ವಿಶೇಷ ಜಪ ಮತ್ತು ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.
 
 
 
 
 
 
 
 
 
 
 
 
 
 
 
 
 
