-->

dyfi blames govt for tragidy | ಆಮ್ಲಜನಕ ದೊರೆಯದೆ ಉಂಟಾದ ಸಾವುಗಳು ಸರಕಾರದ ದುರಾಡಳಿತದ ಪ್ರತೀಕ: ಡಿವೈಎಫ್ಐ

dyfi blames govt for tragidy | ಆಮ್ಲಜನಕ ದೊರೆಯದೆ ಉಂಟಾದ ಸಾವುಗಳು ಸರಕಾರದ ದುರಾಡಳಿತದ ಪ್ರತೀಕ: ಡಿವೈಎಫ್ಐ





ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಆಮ್ಲಜನಕ ದೊರೆಯದೇ 24 ಸಾವುಗಳು ಸಂಭವಿಸಿವೆಯೆಂಬ ಅಘಾತಕಾರಿ ವರದಿ ಬಂದಿದೆ. ಇದು ಸರಕಾರದ ದಿವ್ಯ ನಿರ್ಲಕ್ಷ್ಯ ಮತ್ತು ದುರಾಡಳಿತದ ಫಲವಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.


ಇದರಿಂದಾಗಿ ಅಮಾಯಕ ಪ್ರಜೆಗಳು ಸಾವಿಗೀಡಾಗಬೇಕಾಯಿತು ಅದರಿಂದಾಗಿ ಆ ಕುಟುಂಬಗಳು ತೀವ್ರ ದುಃಖವನ್ನು ಅನುಭವಿಸ ಬೇಕಾಗಿ ಬಂದಿತು. ಈ ಸಾವುಗಳಿಗೆ ಸರಕಾರವೇ ನೇರ ಹೊಣೆಗಾರನಾಗಿದೆ ಎಂದು ಆರೋಪಿಸಿದೆ.


ಉನ್ನತ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸರಕಾರ ಹೇಳಿರುವುದು ತನ್ನ ಹೊಣೆಗಾರಿಕೆಯನ್ನು ಮುಚ್ಚಿಟ್ಟು ಕೊಳ್ಳುವ ದುರುಳ ತಂತ್ರವಾಗಿದೆ. ತಕ್ಷಣವೇ, ಸದರಿ ಪ್ರಕರಣವನ್ನು ಸ್ವತಂತ್ರವಾದ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಲು ಮತ್ತು ಆ ಮೂಲಕ ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಅಗತ್ಯ ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಬಲವಾಗಿ ಆಗ್ರಹಿಸುತ್ತದೆ.


ಅದೇ ರೀತಿ, ಸಾವಿಗೀಡಾದ ನಾಗರೀಕರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ಡಿವೈಎಫ್ಐ ವ್ಯಕ್ತ ಪಡಿಸುತ್ತದೆ. ಸದರಿ ಕುಟುಂಬಗಳಿಗೆ ತಕ್ಷಣವೇ, ರಾಜ್ಯ ಸರಕಾರ 10 ಲಕ್ಷ ರೂ. ಗಳ ಪರಿಹಾರವನ್ನು ನೀಡುವಂತೆ ಒತ್ತಾಯಿಸುತ್ತದೆ.


Ads on article

Advertise in articles 1

advertising articles 2

Advertise under the article