ಮಂಗಳೂರು ನಗರ ಗಾಂಜಾ ಅಫೀಮು ದಂಧೆಯ ಅಡ್ಡೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಹುದೊಡ್ಡ ಗಾಂಜಾ ಪೆಡ್ಲರ್‌ಗಳ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
Video:
ಮೂಡಬಿದಿರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುದೀಮ್ ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಯಶಸ್ಸು ಸಾಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೊಹಮ್ಮದ್ ಫಾರೂಕ್ (24), ಕೊಡಗು ಜಿಲ್ಲೆಯ ಕುಶಾಲನಗರದ ನಿವಾಸಿ 31 ವರ್ಷದ ಸೈಯ್ಯದ್ ಮೊಹಮ್ಮದ್, ಮಂಗಳೂರು ತಾಲೂಕು ಮುಡಿಪು ಗ್ರಾಮದ ನಿವಾಸಿ 23 ವರ್ಷದ ಮಹಮ್ಮದ್ ಅನ್ಸಾರ್ ಹಾಗೂ ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ 34 ವರ್ಷ ಪ್ರಾಯದ ಮೊಯ್ದೀನ್ ನವಾಜ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಅಪಾರ ಮೊತ್ತದ ಗಾಂಜಾ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳು ಗೋಣಿ ಚೀಲದಲ್ಲಿ ಗಾಂಜಾ ಪ್ಯಾಕೇಟ್‌ಗಳನ್ನು ತುಂಬಿಸಿ ಮಂಗಳೂರಿಗೆ ಪೂರೈಸುತ್ತಿದ್ದರು.
ಸುಮಾರು 200 ಕಿಲೋ ಗ್ರಾಮ್ ತೂಕದ ಗಾಂಜಾ ತುಂಬಿದ ಪ್ಯಾಕ್‌ಗಳನ್ನು ಆರೋಪಿಗಳು ಸಾಗಿಸುತ್ತಿದ್ದರು.
ಇದರ ಜೊತೆಗೆ ಮೂರು ತಲವಾರುಗಳು, ಒಂದು ಚಾಕು, ನಾಲ್ಕು ಮೊಬೈಲ್ ಹಾಗೂ ಒಂದು ವೈಫೈ ಸೆಟ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದು ಇತ್ತೀಚಿನ ದಿನಗಳಲ್ಲಿ ವಶಕ್ಕೆ ಪಡೆದ ಬೃಹತ್ ಪ್ರಮಾಣದ ಗಾಂಜಾ ಇದಾಗಿದೆ.












