104 ವರ್ಷದ ಹಿರಿಯ ಜೀವ ಹಾಗೂ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಕೊರೋನಾ ಗೆದ್ದುಬಂದಿದ್ದಾರೆ. ಬೆಂಗಳೂರು ಜಯದೇವ ಹ್ರದ್ರೋಗ ಆಸ್ಪತ್ರೆಯಿಂದ ಕೋವಿಡ್ ಮುಕ್ತರಾಗಿ ಮನೆಗೆ ತೆರಳಿದರು.
104 ವರ್ಷದ ಹಿರಿಯ ಜೀವ ಕೋವಿಡ್ ಗೆದ್ದು ಬಂದಿರುವುದು ಇತರೆ ರೋಗಿಗಳಿಗೆ ಧೈರ್ಯ ತುಂಬುತ್ತದೆ ಎಂದು ಜಯದೇವ ಆಸ್ಪತ್ರೆಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ನಿರ್ದೇಶಕ ಸಿ.ಎಸ್. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು , ಮತ್ತು ಸಿಬ್ಬಂದಿ ಬಹಳ ಕಾಳಜಿಯಿಂದ ಅವರನ್ನು ನೋಡಿಕೊಂಡು ಕೋವಿಡ್ ವಿರುದ್ಧ ಗೆಲುವಿಗೆ ಸಹಕರಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

