CM Exam Postponed - ಸಿಇಟಿ ಪರೀಕ್ಷೆ ಮುಂದೂಡಿಕೆ: ಪರೀಕ್ಷಾ ಪ್ರಾಧಿಕಾರ ನಿರ್ಧಾರ





ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ದಿನಾಂಕವನ್ನು ಮರು ನಿಗದಿ ಮಾಡಿ ಶೀಘ್ರವೇ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಸ್ಟಷ್ಟಪಡಿಸಿದ್ದಾರೆ.


ಈಗಾಗಲೇ ಸಿ.ಇ.ಟಿ. ಪರೀಕ್ಷೆಯನ್ನು ಮುಂದಿನ ಜುಲೈ ಏಳು ಮತ್ತು ಎಂಟರಂದು ನಡೆಸಲು ದಿನ ನಿಗದಿ ಮಾಡಲಾಗಿತ್ತು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನ ಕೈಗೊಂಡಿದೆ.


ಈ ನಡುವೆ, ಪರಿಷ್ಕೃತ ಪಟ್ಟಿಯಂತೆ ಆಗಸ್ಟ್ 28ರಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆಯಲಿದೆ. ಮರುದಿನ ಅಂದರೆ, ಆಗಸ್ಟ್ 29ರಂದು ಭೌತಶಾಸ್ತ್ರ ಮತ್ತು ರಾಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯುತ್ತದೆ.


ಇದೇ ವೇಳೆ, ಜುಲೈ 9ರಂದು ಗಡಿನಾಡು ಮತ್ತು ಹೊರನಾಡ ಕನ್ನಡಿಗರಿಗೆ ನಡೆಯಬೇಕಿದ್ದ ಭಾಷಾ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದ್ದು, ಆ ಪರೀಕ್ಷೆಯನ್ನು ಆಗಸ್ಟ್ 30ಕ್ಕೆ ನಡೆಸಲು ಮರು ನಿಗದಿಪಡಿಸಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu