-->
bed blocking is a scam?| ಬಿಜೆಪಿ ಸರಕಾರದ ಕೋವಿಡ್ ಮಹಾ ಹಗರಣದ ಸಣ್ಣ ತುಣುಕು ಬೆಡ್ ಬ್ಲಾಕಿಂಗ್ ದಂಧೆ : ಡಿವೈಎಫ್ಐ

bed blocking is a scam?| ಬಿಜೆಪಿ ಸರಕಾರದ ಕೋವಿಡ್ ಮಹಾ ಹಗರಣದ ಸಣ್ಣ ತುಣುಕು ಬೆಡ್ ಬ್ಲಾಕಿಂಗ್ ದಂಧೆ : ಡಿವೈಎಫ್ಐ


ರಾಜ್ಯ ಬಿಜೆಪಿ‌ ಸರಕಾರ ಕೋವಿಡ್ ಹರಡುವಿಕೆಯ ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ದಯನೀಯ ವೈಫಲ್ಯ ಕಂಡಿರುವ ಸಂದರ್ಭದಲ್ಲೆ, ಸರಕಾರದ ಆಯಕಟ್ಟಿನ ಜಾಗದಲ್ಲಿ ಇರುವವರು ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.‌ ಅದರ ಭಾಗವಾಗಿಯೆ ಬೆಂಗಳೂರು ಸಹಿತ ರಾಜ್ಯದ ವಿವಿದೆಡೆ ಅಗತ್ಯ ಔಷಧಿ, ಆಕ್ಸಿಜನ್ ಸಹಿತ ಆಸ್ಪತ್ರೆಯಲ್ಲಿ ಬೆಡ್ ಗಳ ಕಾಳದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.‌ ಇದರ ಪರಿಣಾಮ ಎಲ್ಲೆಡೆ ಹಾಹಾಕಾರ ಎದ್ದಿದೆ. 


ಇಂತಹ ವೈಫಲ್ಯ, ಭ್ರಷ್ಟತೆಯ ಭಾಗವಾಗಿ ಬೆಂಗಳೂರು ವಾರ್ ರೂಂ ವ್ಯಾಪ್ತಿಯಲ್ಲಿ ನಡೆದಿರುವ ಬೆಡ್ ಬ್ಲಾಕಿಂಗ್ ವಿಷಯವನ್ನು ಬಿಜೆಪಿ‌ ಸಂಸದ ತೇಜಸ್ವಿ ಸೂರ್ಯ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಏಜನ್ಸಿಯೊಂದರ ನೌಕರರ ತಲೆಗೆ ಕಟ್ಟುವ, ಮುಸ್ಲಿಂ ಹೆಸರುಗಳನ್ನು ಪ್ರಜ್ಞಾಪೂರ್ವಕ ಎಳೆದು ತಂದು ಕೋಮುಬಣ್ಣ ಹಚ್ಚುವ ಆ ಮೂಲಕ ಬಿಜೆಪಿ ಸರಕಾರದ ವೈಫಲ್ಯ, ಭ್ರಷ್ಟಾಚಾರವನ್ನು ಮರೆಮಾಚುವ ಕೊಳಕು ಯತ್ನ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಬಿಜೆಪಿ‌ ಸರಕಾರ ನಡೆಸಿರುವ ಕೋವಿಡ್ ಮಹಾಹಗರಣದ ಸಣ್ಣ ತುಣುಕು ಬೆಡ್ ಬ್ಲಾಕಿಂಗ್ ದಂಧೆ. ಸಂಸದ ತೇಜಸ್ವಿ ಸೂರ್ಯರಿಗೆ ಧೈರ್ಯ ಇದ್ದರೆ ಕೋವಿಡ್ ಸಂದರ್ಭದ ಔಷಧಿ, ಆಸ್ಪತ್ರೆ, ಚಿಕಿತ್ಸೆ, ಪರಿಹಾರ ಪ್ಯಾಕೇಜ್, ಖರೀದಿ ಸಹಿತ ರಾಜ್ಯ ಸರಕಾರದ ಇಡೀ ಕಾರ್ಯ ನಿರ್ವಹಣೆಯನ್ನು ನ್ಯಾಯಾಂಗ ತನಿಖೆ ನಡೆಸಲು ಒತ್ತಾಯಿಸಲಿ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಸವಾಲು ಹಾಕಿದೆ.


ಬಿಜೆಪಿ ಸರಕಾರದ ಪ್ರಭಾವಿ ಸಚಿವರ,ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳ, ಖಾಸಗಿ ಆರೋಗ್ಯ ವ್ಯಾಪಾರಿಗಳ ಶಾಮೀಲಾತಿಯಲ್ಲಿ ನಡೆಯುತ್ತಿರುವ ಆಟದಿಂದಾಗಿಯೆ ರಾಜ್ಯದಲ್ಲಿ ಕೋವಿಡ್ ಹರಡುವಿಕೆ, ಸೋಂಕಿತರಿಗೆ ಚಿಕಿತ್ಸೆಯಲ್ಲಿ ಈ ಮಟ್ಟದ ವೈಫಲ್ಯ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ದುಬಾರಿ ಔಷಧಿಗಳ ಕಾಳದಂಧೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಈ ಆಟದಿಂದಾಗಿಯೇ ಉಂಟಾಗಿರುವ ಪ್ರಮಾದ. ಖಾಸಗಿ, ಕಾರ್ಪೊರೇಟ್ ಆಸ್ಪತ್ರೆಯ ಲಾಬಿ ಪರಿಸ್ಥಿತಿಯನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ಭ್ರಷ್ಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಈ ಎಲ್ಲಾ ವ್ಯವಹಾರಗಳ ಭಾಗವಾಗಿ ಯೋಜಿತ ರೀತಿಯಲ್ಲಿ ಖರೀದಿಗಳು, ಖಾಸಗಿ ಏಜನ್ಸಿಗಳ ನೇಮಕಾತಿಗಳು ನಡೆಯುತ್ತಿವೆ. ಈ ಒಂದು ವರ್ಷಗಳ ಕೋವಿಡ್ ಅವಥಿಯಲ್ಲಿ ರಾಜ್ಯ ಸರಕಾರ ಸಾವಿರಾರು ಕೋಟಿಗಳನ್ನು ಖರ್ಚು ಮಾಡಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರಕಾರದ ಭ್ರಷ್ಟ ಸಿಂಡಿಕೇಟ್ ಎಲ್ಲಾ ಹಂತದಲ್ಲಿ ಕಮೀಷನ್ ದಂಧೆ ನಡೆಸಿರುವುದು ಚರ್ಚೆಗೂ ಕಾರಣವಾಗಿತ್ತು. ಈ ಕಮೀಷನ್ ದಂಧೆಯ ಕಾರಣದಿಂದಲೇ ವಸ್ತು ಪ್ರದರ್ಶನ ಮೈದಾನದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಉಪಯೋಗ ಶೂನ್ಯವಾಗಿ ನೂರಾರು ಕೋಟಿ ರೂಪಾಯಿ ಭ್ರಷ್ಟರ ಪಾಲಾಗಿತ್ತು. ಕೋವಿಡ್ ತೀವ್ರ ಸೋಂಕಿತರಿಗೆ ಬಳಸುವ ದುಬಾರಿ ಔಷಧಿಗಳು ಕಾಳ ಸಂತೆಯಲ್ಲಿ ಮಾತ್ರ ದೊರಕುವ ಸ್ಥಿತಿ ನಿರ್ಮಾಣಗೊಂಡಿದೆ. ಖಾಸಗಿ ಆಸ್ಪತ್ರೆಯ ಬೆಡ್ ಗಳಂತೂ ಹಣದ ಸಾಮರ್ಥ್ಯದ ಮೇಲೆ ಮಾತ್ರ ಲಭ್ಯವಾಗುವ ಸ್ಥಿತಿ ನಿರ್ಮಾಣಗೊಂಡಿದೆ.


ಹೀಗಿರುತ್ತಾ ಕೋವಿಡ್ ಮಹಾ ಹಗರಣದ ಸಣ್ಣ ತುಣುಕಾಗಿರುವ ಬೆಡ್ ಬ್ಲಾಕಿಂಗ್ ಅವ್ಯವಹಾರವನ್ನು ವಿಜೃಂಭಿಸುವುದು, ಅಲ್ಲಿ ಏಜನ್ಸಿಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇನ್ಜೂರಕ್ಕೂ ಹೆಚ್ಚು ಗುತ್ತಿಗೆ ನೌಕರರಲ್ಲಿದ್ದ.ಹದಿನೇಳು ಮುಸ್ಲಿಂ ಹೆಸರನ್ನು ಮುಂದೆ ಮಾಡಿ ಮತೀಯ ತಾರತಮ್ಯದ ಭಾಷೆಯಲ್ಲಿ ದುರುದ್ದೇಶದಿಂದ ಮಾತಾಡುವುದು, ಸರಕಾರವೇ ನಿಂತು ನಡೆಸಿದ ಬೆಡ್ ಬ್ಲಾಕಿಂಗ್ ದಂಧೆಯನ್ನು ಏಜನ್ಸಿಯ ನೌಕರರ ತಲೆಗೆ ಕಟ್ಟಿಬಿಡುವುದು, ಐಟಿ ಸೆಲ್ ಗಳ ಮೂಲಕ ಮುಸ್ಲಿಮ್ ಹೆಸರುಗಳನ್ನು ಹರಿಯಬಿಟ್ಟು ಜನರ ಗಮನವನ್ನು ದಿಕ್ಕುತಪ್ಪಿಸುವುದು ಸಂಸದ ತೇಜಸ್ವಿ ಸೂರ್ಯರ ಪೂರ್ವ ನಿಯೋಜಿತ ಅಜೆಂಡಾದಂತೆ ನಿನ್ನೆಯ ಘಟನಾವಳಿಗಳು ಕಂಡುಬರುತ್ತಿದೆ. ಇದು ಖಂಡನೀಯ.


ಕೋವಿಡ್ ಮಹಾ ದುರಂತದ ಸಂದರ್ಭದಲ್ಲಿ ಇದು ರಾಜ್ಯದ ಜನತೆಗೆ ಎಸಗುವ ದ್ರೋಹ. ಜನತೆ ಇಂತಹ ದಿಕ್ಕುತಪ್ಪಿಸುವ ಕೊಳಕು ಆಟಗಳಿಗಳಿಗೆ ಬಲಿ ಬೀಳಬಾದದು. ಕೊರೋನಾ ಸೋಂಕಿಗೆ ಸಂಬಂಧಿಸಿ ಈ ವರಗೆ ರಾಜ್ಯ ಸರಕಾರ ನಡೆಸಿರುವ ಎಲ್ಲಾ ಯೋಜನೆ, ಖರ್ಚು, ವ್ಯವಹಾರಗಳನ್ನು ನ್ಯಾಯಾಂಗ ತನಿಖೆ ನಡೆಸಲು ಜನ ಸಮುದಾಯ ಒಕ್ಕೊರಲಿನಿಂದ ಒತ್ತಾಯಿಸಬೇಕು, ಸೋಂಕಿತರಿಗೆ ತಾರತಮ್ಯವಿಲ್ಲದ ಉಚಿತ ಚಿಕಿತ್ಸೆ, ಕೋವಿಡ್ ಕರ್ಫ್ಯೂ ಸಂತ್ರಸ್ತರಿಗೆ ಆಹಾರ ಧಾನ್ಯಗಳ ಸಹಿತ ಪ್ಯಾಕೇಜ್ ಗೆ ಆಗ್ರಹಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಡಿವೈಎಫ್ಐ ಮನವಿ ಮಾಡುತ್ತದೆ.

Ads on article

Advertise in articles 1

advertising articles 2

Advertise under the article

holige copy 1.jpg