-->

Ban on Religious program | ಪಾಲಿಕೆ ವ್ಯಾಪ್ತಿಯಲ್ಲಿ ಧಾರ್ಮಿಕ ಆಚರಣೆಗೆ ನಿರ್ಬಂಧ: ತಕ್ಷಣದಿಂದ ಜಾರಿಗೊಳಿಸಿ ಆಯುಕ್ತರ ಆದೇಶ

Ban on Religious program | ಪಾಲಿಕೆ ವ್ಯಾಪ್ತಿಯಲ್ಲಿ ಧಾರ್ಮಿಕ ಆಚರಣೆಗೆ ನಿರ್ಬಂಧ: ತಕ್ಷಣದಿಂದ ಜಾರಿಗೊಳಿಸಿ ಆಯುಕ್ತರ ಆದೇಶ




ಪಾಲಿಕೆ ವ್ಯಾಪ್ತಿಯಲ್ಲಿ ಧಾರ್ಮಿಕ ಆಚರಣೆಗೆ ನಿರ್ಬಂಧ: ತಕ್ಷಣದಿಂದ ಜಾರಿಗೊಳಿಸಿ ಆಯುಕ್ತರ ಆದೇಶ


ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಅನುಸಾರವಾಗಿ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಪಾಲಿಕೆ ಆಯುಕ್ತ ಆಕ್ಷಯ್ ಶ್ರೀಧರ್ ಹೇಳಿದ್ದಾರೆ.


ಈ ಮಾರ್ಗಸೂಚಿ ಪ್ರಕಾರ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದ್ದು, ರಾಜಕೀಯ ಸಮಾರಂಭಗಳು ಮತ್ತು ಇತರ ಆಚರಣೆಗಳಿಗೆ ಹಾಗೂ ಮದುವೆ ಕಾರ್ಯಕ್ರಮಗಳಿಗೆ ಗರಿಷ್ಠ 200 ಜನಕ್ಕಿಂತ ಹೆಚ್ಚಿನ ಭಾಗವಹಿಸುವಿಕೆಯನ್ನು ನಿರ್ಬಂಧಿಸಲಾಗಿದೆ. ಸಭೆ-ಸಮಾರಂಭಗಳಿಗೆ ಹಾಲ್‌ನಲ್ಲಿ 25 ಜನರಿಗೆ ಹಾಗೂ ತೆರೆದ ಪ್ರದೇಶದಲ್ಲಿ 50 ಜನರಿಗೆ ಮೀರಿ ಜನ ಇರಬಾರದು ಎಂಬ ನಿಯಮ ವಿಧಿಸಿದೆ.


ಸರ್ಕಾರದ ಆದೇಶದಂತ ವಿಪತ್ತು ನಿರ್ವಹಣೆ ಕಾಯ್ದೆ 2005ರ ಸೆಕ್ಷನ್ 24ರ ಪ್ರಕಾರ ಈ ಆದೇಶ ಮಾಡಲಾಗಿದೆ.


ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಎಲ್ಲ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.


ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಸೂಪರ್ ಮಾರ್ಕೆಟ್, ಮಾಲ್ ಮತ್ತು ಮದುವೆ ಹಾಲ್ ಸಿಬ್ಬಂದಿಯವರು ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.


Ads on article

Advertise in articles 1

advertising articles 2

Advertise under the article