Vedavyasa Kamath on reservation for GSB | ಮೀಸಲಾತಿ ವಂಚಿತ ಜಿ.ಎಸ್.ಬಿ ಮತ್ತು ಇತರ ಸಮಾಜದವರ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಶಾಸಕ ವೇದವ್ಯಾಸ ಕಾಮತ್

Watch This Video:
BJP MLA Vedavyasa Kamath (Mangaluru South) in Legislative Assembly



ಕಳೆದ ವರ್ಷ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮಾಜದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡಾ ಹತ್ತು ಮೀಸಲಾತಿಯನ್ನು ಜಾರಿಗೊಳಿಸಿತ್ತು. ಕೇಂದ್ರ ಸರಕಾರದ ಈ ನಿರ್ದೇಶನವನ್ನು ದೇಶದ ಎಲ್ಲಾ ರಾಜ್ಯ ಸರಕಾರಗಳು ಕೂಡ ಅನುಷ್ಟಾನಕ್ಕೆ ತಂದಿವೆ. ಆದರೆ ಮೇಲ್ವರ್ಗದ ಸಮಾಜವಾದ ಪ್ರತಿಷ್ಟಿತ ಜಿ.ಎಸ್. ಬಿ. ಸಮಾಜದ ಹಾಗೂ ಇತರ ಕೆಲವು ಸಮಾಜದ ಹೆಸರುಗಳನ್ನು ಯಾದಿಯಲ್ಲಿ ಸೇರಿಸದೆ ಇರುವುದರಿಂದ ಗೌಡ ಸಾರಸ್ವತ ಬ್ರಾಹ್ಮಣ ಹಾಗೂ ಇತರ ಸಮಾಜದ ಹಲವಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗಿದ್ದಾರೆ.


ಸಂವಿಧಾನದ ಈ ಸೌಲಭ್ಯದಿಂದ ಜಿ.ಎಸ್. ಬಿ. ಸಮಾಜದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡ ಬಾರದೆಂದು ವಿಧಾನಸಭಾ ಅಧಿವೇಶನದಲ್ಲಿ ಮ೦ಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ ಅವರು ಕೇಳಿರುವ ಗಮನ ಸೆಳೆಯುವ ಪ್ರಶ್ನೆಗೆ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅಧಿವೇಶನ ಮುಗಿಯುವುದರೊಳಗೆ ಸದ್ಯವೇ ಈ ಬಗ್ಗೆ ಸರಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಗೃಹ ಸಚಿವ ಶ್ರೀ ಬಸವರಾಜ ಬೊಮ್ಮಾಯಿಯವರು ಸದನಕ್ಕೆ ಆಶ್ವಾಸನೆ ನೀಡಿದರು. ಈ ವಿಚಾರದಲ್ಲಿ ಶ್ರೀ ಡಿ ವೇದವ್ಯಾಸ್ ಕಾಮತ್ ಅವರೊಂದಿಗೆ ಕಾರ್ಕಳ ಶಾಸಕರಾದ ಶ್ರೀ ಸುನಿಲ್ ಕುಮಾರ್ ಅವರು ಧ್ವನಿಗೂಡಿಸಿದರು.


ಹಾಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿ.ಎಸ್.ಬಿ. ಸಮಾಜದ ಇಬ್ಬರು ಶಾಸಕರಿದ್ದಾರೆ. ಶಾಸಕ ಶ್ರೀ ಡಿ. ವೇದವ್ಯಾಸ್ ಕಾಮತ್ ಅವರು ವಿಧಾನ ಸಭೆಯ ಸದಸ್ಯರಾಗಿದ್ದು; ಬೆಳ್ತಂಗಡಿಯ ವಕೀಲರಾದ ಶಾಸಕ ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಅವರು ವಿಧಾನಪರಿಷತ್ತಿನ ಸದಸ್ಯರಾಗಿದ್ದಾರೆ.