CPM leaders joins BJP | ಸಿಪಿಎಂ ಯುವ ನಾಯಕ ಶಂಕರ್ ಘೋಷ್ ಬಿಜೆಪಿ ಸೇರ್ಪಡೆ: ಎಡರಂಗಕ್ಕೆ ಹಿನ್ನಡೆ





ಪಶ್ಚಿಮ ಬಂಗಾಳದ ಸಿಪಿಎಂಗೆ ಭಾರೀ ಹಿನ್ನಡೆ ಉಂಟಾಗಿದೆ. ಪಕ್ಷದ ಯುವ ನಾಯಕ ಶಂಕರ್ ಘೋಷ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.


ಸಿಲಿಗುರಿಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮದ ಮುಂದೆ ಪಕ್ಷದ ಬಾವುಟ ಹಿಡಿಯುವ ಮೂಲಕ ಶಂಕರ್ ತಮ್ಮ ಪಕ್ಷಾಂತರವನ್ನು ಘೋಷಿಸಿಕೊಂಡಿದ್ದಾರೆ.


ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹಾಗೂ ಡಾರ್ಜಿಲಿಂಗ್ ಸಂಸದ ರಾಜು ಬಿಷ್ಟ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.


ಸಿಪಿಐಎಂನಲ್ಲಿ ಪ್ರಜಾಸತ್ತೆ ಸತ್ತುಹೋಗಿದೆ ಎಂದು ಆರೋಪಿಸುವ ಮೂಲಕ ಸಿಪಿಎಂ ನಾಯಕತ್ವದ ವಿರೋಧ ಕಟ್ಟಿಕೊಂಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮತ್ತು ಆಂತರಿಕ ಭಿನಮತದ ಕಾರಣಕ್ಕೆ ಅವರನ್ನು ಕಳೆದ ವರ್ಷ ಸಿಪಿಎಂ ಪಕ್ಷದಿಂದ ಉಚ್ಚಾಟಿಸಲಾಗಿತ್ತು.