-->

Mangaluru Police Commissioner ShashiKumar | ಮಾರುವೇಷದಲ್ಲಿ ಪೊಲೀಸ್ ಕಮಿಷನರ್ ಮರಳು ದಂಧೆ ವಿರುದ್ಧ ಕಾರ್ಯಾಚರಣೆ

Mangaluru Police Commissioner ShashiKumar | ಮಾರುವೇಷದಲ್ಲಿ ಪೊಲೀಸ್ ಕಮಿಷನರ್ ಮರಳು ದಂಧೆ ವಿರುದ್ಧ ಕಾರ್ಯಾಚರಣೆ




ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಸದಾ ಸುದ್ದಿಯಲ್ಲಿರುವ ಜನಪರ ಪೊಲೀಸ್ ಅಧಿಕಾರಿ. ಇದೀಗ ಮತ್ತೊಂದು ಕಾರಣಕ್ಕೆ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.



ಕರಾವಳಿಯಲ್ಲಿ ನಿರಾತಂಕವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ದಂಧೆಗೆ ಬ್ರೇಕ್ ಹಾಕಲು ಆಯುಕ್ತರು ಸ್ವತಃ ಕಣಕ್ಕೆ ಇಳಿದಿದ್ದಾರೆ. ಮರಳು ದಂಧೆ ವಿರುದ್ಧ ನಡೆಸಿದ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರಿಗೆ ಡಿಸಿಪಿ ಹಾಗೂ ಇತರ ಅಧಿಕಾರಿಗಳು ಸಾಥ್ ನೀಡಿದ್ದರು.



ಯಾರಿಗೂ ಮಾಹಿತಿ ನೀಡದೆ ಮಾರುವೇಷದಲ್ಲಿ ಅವರು ಈ ಕಾರ್ಯಾಚರಣೆ ನಡೆಸಿದ್ದಾರೆ. ಕೇರಳ ಗಡಿಭಾಗವಾದ ತಲಪಾಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಕಮಿಷನರ್ ಅವರು ಅಕ್ರಮ ಮರಳು ಸಾಗಣೆ ನಡೆಸುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ.


ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರ ಕಾರ್ಯಾಚರಣೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.



ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತ ಹರಿರಂ ಶಂಕರ್ ಇಬ್ಬರೂ ಸ್ಕೂಟರಿನಲ್ಲಿ ತಲಪಾಡಿಯಲ್ಲಿ ಬಂದು ಈ ಕಾರ್ಯಾಚರಣೆ ನಡೆಸಿದ್ದಾರೆ ಇಬ್ಬರು ಹಿರಿಯ ಅಧಿಕಾರಿಗಳು ಸಾಮಾನ್ಯ ಡ್ರೆಸ್ಸಿನಲ್ಲಿ ಆಗಮಿಸಿದ್ದು ಸ್ಥಳೀಯ ಪೊಲೀಸರ ಸಹಕಾರದಿಂದ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ತಂದೆಯನ್ನು ಬಯಲು ಮಾಡಿದ್ದಾರೆ.



ಈ ವೇಳೆ ಪೊಲೀಸ್ ಆಯುಕ್ತರ ಎಂದು ಗೊತ್ತಿಲ್ಲದೆ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಕಾರಿನಲ್ಲಿದ್ದವರು ಅಡ್ಡ ಗಟ್ಟಲು ಮುಂದಾದಾಗ ಪೊಲೀಸ್ ಆಯುಕ್ತರು ಉಳ್ಳಾಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಚಂದ್ರ ಎಂಬಾತನನ್ನು ಬಂಧಿಸಿದ್ದಾರೆ.



ಅವನು ನೀಡಿದ ಮಾಹಿತಿಯ ಆಧಾರಿಸಿ ಒಟ್ಟು ಹತ್ತು ಮಂದಿಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿದೆ ಟಿಪ್ಪರ್ ಚಾಲಕ ಸೂರಜ್, ಚಂದ್ರಹಾಸ, ರಾಕೇಶ್ ಹಾಗೂ ಲಾರಿ ಮಾಲೀಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.



ಇದೇ ವೇಳೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಸೈ ಚಂದ್ರ ಅವರನ್ನು ದೂಡಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಸಿ. ರೋಡ್ ನಿವಾಸಿ ಇಲಿಯಾಸ್, ರಹೀಂ ಹಾಗೂ ಪರಾರಿಯಾದ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 



ಆರೋಪಿಗಳು ಎರಡು ಕಾರುಗಳ ಮೂಲಕ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದರು ಎನ್ನಲಾಗಿದೆ

Ads on article

Advertise in articles 1

advertising articles 2

Advertise under the article