
Mehul Choksi assets | ಮೆಹುಲ್ ಚೋಸ್ಕಿಯ 14 ಕೋಟಿ ಆಸ್ತಿ ಮುಟ್ಟುಗೋಲು: ವಿಶೇಷ ನ್ಯಾಯಾಲಯ ಆದೇಶ
2/05/2021 03:19:00 AM

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಮತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೆಹುಲ್ ಚೋಸ್ಕಿ ಆಸ್ತಿ ಮುಟ್ಟುಗೋಲಿಗೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಗೀತಾಂಜಲಿ ಜ್ಯುವೆಲ್ಲರ್ಸ್ ಮಾಲಕರು, ಪ್ರವರ್ತಕನೂ ಆಗಿದ್ದ ಮೆಹುಲ್ ಚೋಸ್ಕಿ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ.
ಇದೇ ವೇಳೆ, ನೀರವ್ ಮೋದಿಯ ಸಹೋದರಿ ಮತ್ತು ಆಕೆಯ ಪತಿ ವಿರುದ್ಧ ಹೊರಡಿಸಲಾಗಿರುವ ಜಾಮೀನು ರಹಿತ ವಾರೆಂಟ್‌ನ್ನು ರದ್ದುಪಡಿಸಬೆಕು ಎಂದು ಅವರ ಪರ ವಕೀಲರು ವಿಶೇಷ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ.