ಮಂಗಳೂರು: ಕರಾವಳಿಯ ಮುಂಚೂಣಿ ಜನಸಮುದಾಯವಾದ ಬಂಟ ಸಮುದಾಯದ ಮುಖಂಡ ಹಾಗೂ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಡಾ. ಆಶಾಜ್ಯೋತಿ ರೈ ಅವರ ಎರಡನೇ ಪುತ್ರಿಯ ವಿವಾಹ ಇದೀಗ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂತರ್ಜಾತಿ ವಿವಾಹವಾಗಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಶರಣ್ ಪಂಪ್‌ವೆಲ್ ಅಸಮಾಧಾನದಿಂದ ಪೋಸ್ಟ್ ಮಾಡಿದ್ದಾರೆ.
"ಅಜಿತಣ್ಣ,ಆಶಕ್ಕ ನಿಮ್ಮ ಮಗಳ ಮಧುವೆಯ ಬಗ್ಗೆ ನೀವು ತೆಗೆದುಕೊಂಡ ನಿಲುವು ನನಗೆ ಹಾಗೂ ಹಿಂದೂ ಸಮಾಜಕ್ಕೆ ಬಹಳ ನೋವುಂಟುಮಾಡಿದೆ" ಎಂಬ ಬರಹದೊಂದಿಗೆ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ಅಪಾರ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

