ಕಟೀಲು: ನಿಲ್ಲಿಸಿದ್ದ ಟೂರಿಸ್ಟ್ ಕಾರಿನಲ್ಲಿ ಉಡುಪಿ ಮೂಲದ ನಾಗರಿಕರೊಬ್ಬರ ಪತ್ತೆಯಾಗಿರುವ ಘಟನೆ ಮಂಗಳೂರು ತಾಲೂಕಿನ ಹೊರವಲಯದಲ್ಲಿರುವ ಕಟೀಲಿನಲ್ಲಿ ವರದಿಯಾಗಿದೆ.
ಕಟೀಲು ದೇವಸ್ಥಾನದ ಬಳಿ ಇರುವ ಸೇತುವೆ ಸಮೀಪದ ಹಳೆ ಪೆಟ್ರೋಲ್ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ ಮೃತರನ್ನು ಉಡುಪಿಯ ಲಕ್ಷ್ಮೀಂದ್ರ ನಗರದ ನಿವಾಸಿ ದಯಾನಂದ ನಾಯಕ್ ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಯಾರಾದರೂ ಕೊಲೆ ಮಾಡಿದ್ದಾರೆ ಅಥವಾ ಸಹಜ ಸಹಜ ರೀತಿಯಲ್ಲಿ ಸಾವು ಸಂಭವಿಸಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
