ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಭರ್ಜರಿಯಾಗಿ ನಡೆದಿತ್ತು. ನಗರದ ವಿವಿಧೆಡೆ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೃಪಾಕಟಾಕ್ಷದಿಂದಲೇ ಈ ಕಾಮಗಾರಿ ನಡೆಯುತ್ತಿದೆ ಎಂಬುದು ಬೇರೆ ಹೇಳಬೇಕಾಗಿಲ್ಲ.
ಈಗ ಈ ಸರಣಿ ಕಾಮಗಾರಿಗಳ ಗುಣಮಟ್ಟದ ಪ್ರಶ್ನೆ ಎದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದಲ್ಲಿ ಫುಟ್‌ಪಾತ್‌ವೊಂದು ಸ್ಮಾರ್ಟ್ ಸಿಟಿ ಕಾಮಗಾರಿಯ ಮಹಾಕಥೆಯನ್ನು ಸಾರಿ ಏಳುತ್ತಿದೆ.
ಮಂಗಳೂರಿನ ನಾಗರಿಕರು ಈ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಎಷ್ಟು ಕಳಪೆ ಕಾಮಗಾರಿಗೆ ಕೃಪಾಶ್ರಯ ನೀಡಿದ್ದಾರೆ ಎಂಬುದು ಇದೀಗ ಜನಜನಿತವಾಗಿದೆ.
ಜನತೆ ನೀಡಿದ ತೆರಿಗೆ ಹಣ ಕೇಂದ್ರ ಸರ್ಕಾರದ ಅನುದಾನದ ರೂಪದಲ್ಲಿ ಕೋಟಿಗಟ್ಟಲೆ ಹರಿದುಬಂದು ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೇಬಿಗೆ ಇಳಿದಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಎಂದು ಹೇಳಿ ಜನರಿಗೆ ಮಾತ್ರ ಪಂಗನಾಮ ಹಾಕಲಾಗಿದೆ.
ಇದೀಗ, ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿ ಮತ್ತು ಅದರ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?


