ನೂತನವಾಗಿ ಅಧಿಕಾರ ಸ್ವೀಕರಿಸಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಾನೊಬ್ಬ ಉತ್ತಮ ಗಾಯಕ ಎಂಬುದನ್ನೂ ನಿರೂಪಿಸಿದರು.
ಎರಡು ದಿನಗಳ ಹಿಂದಷ್ಟೇ ಮಂಗಳೂರಿನ ಗಂಡುಕಲೆ ಯಕ್ಷಗಾನವನ್ನು ವೀಕ್ಷಿಸಿ ಆನಂದಿಸಿದ್ದ ಶಶಿಕುಮಾರ್, ಕಳೆದ ರಾತ್ರಿ ಮಂಗಳೂರಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ದೇವರ ಸ್ತುತಿಸುವ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನ ಸೆಳೆದಿದ್ದಾರೆ.