-->

Sharan Pumpwell | ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್‌ವೆಲ್‌ ವಿರುದ್ಧ ಅಪಪ್ರಚಾರ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Sharan Pumpwell | ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್‌ವೆಲ್‌ ವಿರುದ್ಧ ಅಪಪ್ರಚಾರ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ





ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ನಡೆಯುತ್ತಿರುವ ಅಪಪ್ರಚಾರ ತಕ್ಷಣ ನಿಲ್ಲಿಸಬೇಕು ಮತ್ತು ಇಂತಹ ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳನ್ನು ಬಂಧಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.



ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಾಗ ಅದನ್ನು ಚಿತ್ರೀಕರಿಸಿ ಆಧುನಿಕ ಅಂತರ್ಜಾಲದ ಮೂಲಕ ಅನಗತ್ಯ ಸುಳ್ಳು ವಿಷಯಗಳನ್ನು ಸೇರಿಸಿ ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮೇಲೆ ನಿರಾಧಾರ ಆರೋಪಗಳನ್ನು ಮಾಡುತ್ತಿರುವುದನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಪಪ್ರಚಾರ ಹಬ್ಬುತ್ತಿರುವ ವಿಷಯ ಬಹಳ ಕಳವಳಕಾರಿಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.



ಈ ಪ್ರಕ್ರಿಯೆ ವಿರುದ್ಧ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆಹಚ್ಚಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಇಂತಹ ವಿಷಯ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಡಳಿತವನ್ನು ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ.



ಈಗಾಗಲೇ ನಮ್ಮ ಸಂಘಟನೆಯ ಕಾರ್ಯಕರ್ತರು ಈ ಬಗ್ಗೆ ಹೋರಾಟ ಮಾಡಬೇಕೆಂದು ಇಚ್ಛೆಯನ್ನು ವ್ಯಕ್ತಪಡಿಸಿದರೂ ಸಾಮಾಜಿಕ ಹಿತಾಸಕ್ತಿಯಿಂದ ಅದನ್ನು ನಡೆಸದಂತೆ ಸೂಚನೆ ನೀಡಿದ್ದು ಈ ಬಗ್ಗೆ ತಕ್ಷಣವೇ ಸೂಕ್ತ ಕಾನೂನು ಕ್ರಮಗಳಾಗದಿದ್ದಲ್ಲಿ ಮುಂದೆ ಆಗಬಹುದಾದ ಘಟನೆಗಳಿಗೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article