-->

Ragging in Srinivas College-9 students arrested | ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ Ragging: 9 ವಿದ್ಯಾರ್ಥಿಗಳ ಬಂಧನ

Ragging in Srinivas College-9 students arrested | ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ Ragging: 9 ವಿದ್ಯಾರ್ಥಿಗಳ ಬಂಧನ





ಮಂಗಳೂರು ನಗರದ ಹೊರ ವಲಯದಲ್ಲಿ ಇರುವ ವಳಚ್ಚಿಲ್ ಎಂಬಲ್ಲಿ ಪ್ರತಿಷ್ಠಿತ ಎಂದು ಹೇಳಿಕೊಳ್ಳುವ ಶ್ರೀನಿವಾಸ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೈಟೆಕ್ Raggingನಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, 9 ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.



ಬಂಧಿತರು ಕೇರಳ ಮೂಲದವರಾಗಿದ್ದಾರೆ. ಕ್ಯಾಲಿಕಟ್, ಕಣ್ಣೂರು, ಕಾಸರಗೋಡು ಮತ್ತು ಮಲ್ಲಪುರಂ ಜಿಲ್ಲೆಯ ವಿದ್ಯಾರ್ಥಿಗಳಾಗಿದ್ದಾರೆ.



Ragging ಎಂಬ ಶೋಷಣೆಗೆ ಒಳಗಾದ ಸಂತ್ರಸ್ತ ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ಧಾರೆ.



ಎಲ್ಲ ವಿದ್ಯಾರ್ಥಿಗಳು ಶ್ರೀನಿವಾಸ ಕಾಲೇಜಿನ ಎರಡನೇ ಮತ್ತು ಮೂರನೇ ವರ್ಷದ ಫಾರ್ಮಸಿ ಪದವಿ ವಿದ್ಯಾರ್ಥಿಗಳಾಗಿದ್ದಾರೆ.



ಜಿಷ್ಣು, ಅಶ್ವಥ್, ಸಾಯಿನಾಥ್, ಶ್ರೀಕಂಠ, ಅಭಿನವ್, ಮುಕ್ತಾರ್ ಅಲಿ, ಮೊಹಮ್ಮದ್ ರಜೀಂ, ರಾಹುಲ್, ರಾಜೀವ್ ಬಂಧಿತ ಆರೋಪಿ ವಿದ್ಯಾರ್ಥಿಗಳಾಗಿದ್ದಾರೆ.



ಈ ಬಗ್ಎಗ ಪೊಲೀಸರೊಂದಿಗೆ ಕಾಲೇಜಿನ ಆಡಳಿತ ಮಂಡಳಿ ಉಡಾಫೆಯಿಂದ ವರ್ತಿಸಿದೆ ಎಂದು ಹೇಳಲಾಗಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗಳು ಜವಾಬ್ದಾರಿಯುತವಾಗಿದ್ದು, ಗಂಭೀರವಾಗಿ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿತ್ತು. ಮತ್ತು ವಿದ್ಯಾರ್ಥಿಗಳು Ragging ಮತ್ತು ಮಾದಕ ದ್ರವ್ಯ ಸೇವನೆಯ ಚಟಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯ ಮತ್ತು ಗುರುತರ ಜವಾಬ್ದಾರಿ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.


Ragging in Srinivas college and 9 students are reportedly arrested by the Mangaluru rural police. Raids are conducted based on the complaint made by the victim students. all 9 students are from Kerala.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article