ಬೆಳ್ತಂಗಡಿಯಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರು ಮೂಲದ 9ನೇ ತರಗತಿ ವಿದ್ಯಾರ್ಥಿನಿಗೆ ಉಜಿರೆಯ ಕಾಮಪಿಪಾಸುವೊಬ್ಬ ದೂರವಾಣಿ ಮೂಲಕ ಸಂಪರ್ಕಿಸಿ ಸ್ನೇಹ ಬೆಳೆಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ಮಹಮ್ಮದ್ ಅಮನ್ ಎಂದು ಹೇಳಲಾಗಿದೆ. ಮೀನಿನ ವ್ಯಾಪಾರಿಯೊಬ್ಬರ ಪುತ್ರನಾಗಿರುವ ಈತ ತನ್ನ ಸ್ನೇಹಿತೆಯ ಮುಖಾಂತರ ಅಪ್ರಾಪ್ತೆ ಸಂತ್ರಸ್ತೆಯ ಪರಿಚಯ ಮಾಡಿಕೊಂಡಳು. ನಂತರ ಕಳೆದ ಆರು ತಿಂಗಳಿನಿಂದ ಈತ ಆತ್ಮೀಯನಾಗುವ ನಾಟಕವಾಡಿದ.
ಬಳಿಕ ಹೇಗೋ ಮರಳುಮಾಡಿ ಆಕೆಯ ಬೆತ್ತಲೆ ಚಿತ್ರವನ್ನು ಪಡೆದುಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ. ನೀನು ನನ್ನೊಂದಿಗೆ ಹೊರಗೆ ತಿರುಗಾಡಲು ಬರಬೇಕು. ಇಲ್ಲದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಈತ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.
ಈ ವಿಷಯ ಅಪ್ರಾಪ್ತೆ ಬಾಲಕಿಯ ಮನೆಯವರಿಗೆ ತಿಳಿದು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆಯಲ್ಲಿ ಇಂತಹ ಅನೇಕ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು, ಇದಕ್ಕೆಲ್ಲ ಅನಧಿಕೃತ ಹಾಸ್ಟೆಲ್‌ಗಳೇ ಮೂಲ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.