ಪತ್ನಿ ತನ್ನ ಪ್ರಿಯಕರನ ಜೊತೆಗೆ ಅನೈತಿಕ ಸಂಬಂಧ ಹೊಂದಿರುವ ಘಟನೆ ಕೊಲೆಯಲ್ಲಿ ಪರ್ಯವಸಾನಗೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.
ತನ್ನ ಪತ್ನಿ ಇನ್ನೊಬ್ಬನ ಜೊತೆ ದೇಹ ಹಂಚಿಕೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪತಿ, ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಂಧನಾಳ ಗ್ರಾಮದ ತೋಟದ ಮನೆಯಲ್ಲಿ ಈ ಕೃತ್ಯ ನಡೆದಿದೆ.
ಘಟನೆಯ ವಿವರ:
ಲಕ್ಷ್ಮಣ ಎಂಬಾತ ತನ್ನ ಪತ್ನಿ ಈರಮ್ಮ ಅಲಮೇಲ ಎಂಬವಳ ಜೊತೆ ಸಂಸಾರ ಮಾಡಿಕೊಂಡಿದ್ದ. ಆಕೆಗೆ ರುದ್ರಪ್ಪ ಅಲಮೇಲ ಎಂಬವನ ಜೊತೆ ಪರಿಚಯವಾಗಿ, ಈ ಪರಿಚಯದಿಂದ ಸಲುಗೆ ಬೆಳೆದು ಅನೈತಿಕ ಸಂಬಂಧದ ವರೆಗೆ ಬೆಳೆದು ಬಂತು.
ಬರಬರುತ್ತಾ ರುದ್ರಪ್ಪ, ಈರಮ್ಮನ ಮನೆಗೆ ಬರುವುದು ಹೆಚ್ಚಾಯಿತು. ಈ ವಿಷಯ ಗಂಡ ಲಕ್ಷ್ಮಣನಿಗೂ ಗೊತ್ತಾಯಿತು. ಪತ್ನಿಯ ಈ ಅನೈತಿಕ ಚಟುವಟಿಕೆಯಿಂದ ಬೇಸತ್ತ ಗಂಡ ಮಚ್ಚಿನಿಂದ ಲಕ್ಷ್ಮಣನನ್ನು ಕೊಲೆಗೈದ. ಈ ಸಂದರ್ಭದಲ್ಲಿ ಪತ್ನಿ ಈರಮ್ಮನ ಮೇಲೂ ಆತ ಮಚ್ಚಿನ ಪ್ರಹಾರ ನಡೆಸಿದ. ಆಕೆಯೂ ಹೆಣವಾದಳು.
ಘಟನೆಯ ಸುದ್ದಿ ತಿಳಿದು ಇಂಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
