Watch this video (Carstreet tree fell down)
ಮಂಗಳೂರು: ಇಲ್ಲಿನ ರಥಬೀದಿಯ 300 ವರ್ಷ ಹಳೆಯ ಅಶ್ವಥಮರ ನೆಲಕ್ಕೊರಗಿದೆ. ಬೆಳ್ಳಂಬೆಳಿಗ್ಗೆ ಬೃಹತ್ ಮರ ಧರಾಶಾಹಿ ಆಗಿರುವುದರಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ.
ರಥಬೀದಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ನೀರಿನ ಟ್ಯಾಂಕರ್, ಜೆಸಿಬಿ ಮತ್ತು ಒಂದು ಕಾರಿಗೆ ಹಾನಿಯಾಗಿದೆ.
ಬೃಹತ್ ಮರ ಒಳಗೆ ಟೊಳ್ಳಾಗಿದ್ದು, ಇದು ಸುಮಾರು 300 ವರ್ಷಗಳಷ್ಟು ಹಳೆಯದ್ದು ಎನ್ನಲಾಗಿದೆ. ಗಾಳಿ ಬೀಸಿದ ಕಾರಣ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.