Bike ride without person | ಸವಾರನಿಲ್ಲದ ಬೈಕ್ ಚಲಿಸಿದೆ... ದೆವ್ವದ ಕಾಟವೇ..?
1/27/2021 10:22:00 AM
ಈ ಆಧುನಿಕ ಯುಗದಲ್ಲೂ ದೆವ್ವದ ಕಾಟ ಇದೆ ಎಂದರೆ ಯಾರೂ ನಂಬಲ್ಲ. ಆದರೆ, ಅಚ್ಚರಿಯಾದರೂ ಇದು ಸತ್ಯ. ಸವಾರನಿಲ್ಲದೆ ಬೈಕ್‌ವೊಂದು ತನ್ನಷ್ಟಕ್ಕೆ ಚಲಿಸಿ ಎಲ್ಲರಲ್ಲೂ ಅಚ್ಚರಿ ಹುಟ್ಟಿದೆ. ಕರಾವಳಿಯ ಬಂಟ್ವಾಳದಲ್ಲಿ ಹೀಗೊಂದು ಪವಾಡ ನಡೆದಿದೆ.
ಇದನ್ನು ದೆವ್ವದ ಕಾಟ ಎಂದು ಹೇಳುವವರೂ ಇದ್ದಾರೆ.
ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಪಲ್ಸರ್ ಬೈಕ್‌ವೊಂದು ಎಲ್ಲರ ಅಚ್ಚರಿಯ ಕೇಂದ್ರವಾಗಿದೆ. ಮನೆಯ ಗೇಟ್ ಮುಂದೆ ನಿಲ್ಲಿಸಿದ ಬೈಕ್ ತನ್ನಷ್ಟಕ್ಕೇ ಒಂದು ಸುತ್ತು ಹಾಕಿ ಕೆಳಗೆ ಬಿದ್ದಿದೆ. ಈ ದೃಶ್ಯ ಆ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದು ದೆವ್ವದ ಕಾಟ ಎಂದು ಕೆಲವರು ಬೆಚ್ಚಿ ಬಿದ್ದಿದ್ದಾರೆ.
ಇನ್ನು ಕೆಲವರು ಇದೊಂದು ಅತಿಮಾನುಷ ಶಕ್ತಿಯ ಕೈವಾಡ ಇರಬಹುದು ಎಂದು ಅಂದಾಜಿಸಿದ್ದಾರೆ.
ಒಟ್ಟಿನಲ್ಲಿ ಹೇಳಿದರೆ ಯಾರೂ ನಂಬದ ಈ ಘಟನೆ ನಡೆದಿರುವುದಂತೂ ಸತ್ಯ....