-->
Viral Photo- Annamalai with C T Ravi | ತಮಿಳುನಾಡಿನಲ್ಲಿ ಬಿಜೆಪಿ ಸಂಚಲನ: ಅಣ್ಣಾಮಲೈ ಜೊತೆ ಸಿ.ಟಿ. ರವಿ ಪಕ್ಷ ಸಂಘಟನೆ-ವೈರಲ್ ಫೋಟೋ

Viral Photo- Annamalai with C T Ravi | ತಮಿಳುನಾಡಿನಲ್ಲಿ ಬಿಜೆಪಿ ಸಂಚಲನ: ಅಣ್ಣಾಮಲೈ ಜೊತೆ ಸಿ.ಟಿ. ರವಿ ಪಕ್ಷ ಸಂಘಟನೆ-ವೈರಲ್ ಫೋಟೋಸ್ಟಾರ್ ರಾಜಕಾರಣಿ ಅಣ್ಣಾಮಲೈ ಜೊತೆ ಸಿ.ಟಿ. ರವಿ ಪಕ್ಷ ಸಂಘಟನೆಯನ್ನು ಮುನ್ನಡೆಸುವ ವಿಶಿಷ್ಟ ಭಂಗಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡಿದೆ.


ತಮಿಳುನಾಡು ರಾಜ್ಯ ವಿಧಾನಸಭೆಗೆ ಚುನಾವಣೆ ಬಾಕಿ ಇರುವಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದೆ. ಒಂದು ಕಡೆ ಅಣ್ಣಾಡಿಎಂಕೆ ಇನ್ನೊಂದೆಡೆ ಡಿಎಂಕೆ ಮಧ್ಯೆ ಬಿಜೆಪಿ ತಣ್ಣಗೆ ಸದ್ದು ಮಾಡುತ್ತಿದೆ.


ಇತ್ತೀಚೆಗಷ್ಟೇ ಪೊಲೀಸ್ ಹುದ್ದೆಯನ್ನು ತ್ಯಜಿಸಿ ರಾಜಕೀಯ ಅಂಗಳಕ್ಕೆ ಇಳಿದಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಗೊಂಡು ರಾಜಕೀಯದ ರಂಗ ಪ್ರವೇಶ ಮಾಡಿದ್ದಾರೆ.


ಅದರ ಜೊತೆ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ಜೊತೆ ತಮಿಳುನಾಡು ಪಕ್ಷ ಸಂಘಟನೆಯ ಹೊಣೆ ಹೊತ್ತಿರುವ ಸಿ.ಟಿ. ರವಿ ಪಕ್ಷವನ್ನು ಸಂಘಟಿಸುವ ಭರವಸೆ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article