-->
ABVP Mangaluru | ಮಂಗಳೂರಿನಲ್ಲಿ ಎಬಿವಿಪಿ ಅಭ್ಯಾಸವರ್ಗ

ABVP Mangaluru | ಮಂಗಳೂರಿನಲ್ಲಿ ಎಬಿವಿಪಿ ಅಭ್ಯಾಸವರ್ಗ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಅಭ್ಯಾಸವರ್ಗವು ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದ ಸುಮನಸ ಸಭಾಭವನದಲ್ಲಿ ನಡೆಯಿತು.


ಈ ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ, ಗೋಪಾಲಕೃಷ್ಣ ದೇವಾಲಯದ ಆಡಳಿತ ಮೊಕ್ತೇಸರರು ಹಾಗೂ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ "ಡಾ||ಕೆ.ಸಿ. ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿ ಪರಿಷತ್ ಕಳೆದ 73 ವರ್ಷಗಳಿಂದ ವಿದ್ಯಾರ್ಥಿ ಸಮುದಾಯದಲ್ಲಿ ದೇಶೀಯ ಚಿಂತನೆಗಳ ಮೂಲಕ ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸುವ ಜೊತೆಗೆ ಶೈಕ್ಷಣಿಕವಾಗಿ ಮಾತ್ರವಲ್ಲದೆ ಸಮಾಜದ ವಿವಿಧ ಆಯಾಮಗಳಲ್ಲಿ ಸರ್ವಸ್ಪರ್ಶಿ ಸಮಾಜ ಮುಖಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದರು.


ನಂತರ ಕಾರ್ಯವನ್ನುದ್ದೇಶಿಸಿ ಅ.ಭಾ.ವಿ.ಪ ಇದರ ರಾಷ್ಟ್ರೀಯ ಕಾರ್ಯದರ್ಶಿಯಾದ ಹರ್ಷನಾರಾಯಣ ಅವರು ಮಾತನಾಡಿದರು. ಉದ್ಘಾಟನಾ ಅವಧಿಯ ನಂತರದ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ಹರ್ಷನಾರಾಯಣ ತೆಗೆದುಕೊಂಡರು.


ಈ ಸಂದರ್ಭದಲ್ಲಿ ಅ.ಭಾ.ವಿ.ಪ ಮಂಗಳೂರು ನಗರ ಅಧ್ಯಕ್ಷೆಯಾದ ಶ್ರೀಮತಿ ಭಾರತಿ ಪ್ರಭು, , ಮಂಗಳೂರು ಮಹಾನಗರ ಕಾರ್ಯದರ್ಶಿ ಮಣಿಕಂಠ ಕಳಸ , ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article