ಮಂಗಳೂರು ತಾಲೂಕಿನ ಎಕ್ಕಾರು ಗ್ರಾಮ ಪ್ರಕೃತಿಯ ಮಡಿಲಲ್ಲಿ ವಿಹಂಗಮವಾಗಿ ಹಸಿರಿನಿಂದ ಕಂಗೊಳಿಸುವ ಕೃಷಿ ಪ್ರಧಾನ ಊರು. ಈ ಊರು ಎರಡು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ತೆಂಕ ಎಕ್ಕಾರು ಮತ್ತು ಬಡಗ ಎಕ್ಕಾರು.
ಇಲ್ಲಿ ಗ್ರಾಮ ದೇವಸ್ಥಾನಗಳ ಪೈಕಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಮುಖ. ದೈವಸ್ಥಾನವಾಗಿ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನವೇ ಪ್ರಧಾನ. ಈ ದೈವಸ್ಥಾನಕ್ಕೆ ಐತಿಹಾಸಿಕ ಮಹತ್ವವಿದೆ.