CPIM-Congress fight | ಎಸ್‌ಡಿಪಿಐ-ಕೈ ಜಗಳ: ಬೆನ್ನಲ್ಲೇ ಸಿಪಿಎಂ ಅಭ್ಯರ್ಥಿ ಮೇಲೆ ಕೈ ಕಾರ್ಯಕರ್ತರ ಹಲ್ಲೆ
12/24/2020 06:02:00 AM
ಮಂಗಳೂರು ನಗರದ ಹೊರವಲಯದಲ್ಲಿ ಇರುವ ಉಳ್ಳಾಲ ಕ್ಷೇತ್ರ ರಾಜಕೀಯ ಗುದ್ದಾಟಕ್ಕೆ ಬೆನ್ನುಬೆನ್ನಿಗೆ ಸುದ್ದಿ ಮಾಡುತ್ತಿದೆ. ಎರಡು ದಿನಗಳ ಹಿಂದಷ್ಟೇ ಉಳ್ಳಾಲದಲ್ಲಿ ಎಸ್‌ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗುದ್ದಾಟ ನಡೆದ ಬೆನ್ನಲ್ಲೇ ಹರೇಕಳದಲ್ಲಿ ಮತ್ತೊಂದು ರಾಜಕೀಯ ವಿದ್ವೇಷದ ಘಟನೆ ವರದಿಯಾಗಿದೆ.
ಹರೇಕಳದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ನಿಂತಿದ್ದ ಸಿಪಿಎಂ ಅಭ್ಯರ್ಥಿ ಮೇಲೆ ಕೈ ಕಾರ್ಯಕರ್ತರೊಬ್ಬರು ತನ್ನ ದರ್ಪ ತೋರಿದ್ದಾರೆ. ಬದ್ರುದ್ದೀನ್ ಎಂಬವರು ಮರದ ಒನಕೆಯಿಂದ ಅಭ್ಯರ್ಥಿ ಇಕ್ಬಾಲ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆಯ ಕುರಿತಂತೆ ಕೊಣಾಜೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.