-->
Udupi Mut income | ಶಿರೂರು ಮಠದಲ್ಲಿ ಕೋಟ್ಯಂತರ ರೂ. ಆದಾಯ ದುರುಪಯೋಗ?: ಸೋದೆ, ಫಲಿಮಾರು ಯತಿಗಳ ಬಗ್ಗೆ ಶಿರೂರು ಭಕ್ತರು ಹೇಳಿದ್ದೇನು...?

Udupi Mut income | ಶಿರೂರು ಮಠದಲ್ಲಿ ಕೋಟ್ಯಂತರ ರೂ. ಆದಾಯ ದುರುಪಯೋಗ?: ಸೋದೆ, ಫಲಿಮಾರು ಯತಿಗಳ ಬಗ್ಗೆ ಶಿರೂರು ಭಕ್ತರು ಹೇಳಿದ್ದೇನು...?


ಉಡುಪಿ: ಉಡುಪಿ ಅಷ್ಟಮಠದ ಅತ್ಯಂತ ವಿವಾದಿತ ಯತಿ ಶಿರೂರು ಶ್ರೀಗಳ ಕುರಿತು ಮತ್ತೊಂದು ಸುತ್ತಿನ ವಿವಾದ ಸೃಷ್ಟಿಯಾಗಿದೆ. ಸೋದೆ ಮತ್ತು ಫಲಿಮಾರು ಶ್ರೀಗಳು ಶಿರೂರು ಶ್ರೀಗಳ ಬಗ್ಗೆ ಒಂದು ಅಪವಾದವನ್ನು ಹಾಕಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಉಭಯ ಶ್ರೀಗಳು, ಶಿರೂರು ಶ್ರೀಗಳು ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಅಪವಾದ ಹಾಕಿದ್ದರು.


ಇದಕ್ಕೆ ಶಿರೂರು ಮಠದ ಭಕ್ತರು ಕೆರಳಿ ಕೆಂಡವಾಗಿದ್ದಾರೆ. ಕೀರ್ತಿಶೇಷ ಶಿರೂರು ಬಗ್ಗೆ ಸತ್ಯ ಗೊತ್ತಿಲ್ಲದ ಈ ಉಭಯ ಯತಿಗಳು ತಮ್ಮ ಪ್ರೀತಿ ಪಾತ್ರ ಯತಿಗಳ ಬಗ್ಗೆ ಇಲ್ಲಸಲ್ಲದ ಹಾಗೂ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ಧಾರೆ.ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದ ಆಡಳಿತಾವಧಿಗೆ ಸಂಬಂಧಿಸಿದ 2017-18ರ ವರೆಗಿನ ಎಲ್ಲ ವರ್ಷದ ಹಾಗೂ ಎಲ್ಲ ರೀತಿಯ ತೆರಿಗೆಗಳನ್ನು ಪಾವತಿ ಮಾಡಲಾಗಿದೆ. ಈ ಕುರಿತ ಅಧಿಕೃತ ಮಾಹಿತಿ, ಪತ್ರಗಳು ಲಭ್ಯವಿದೆ ಎಂದು ಭಕ್ತ ಸಮಿತಿ ಹೇಳಿದೆ.ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೊಟೀಸ್ ಜಾರಿಗೊಳಿಸಿದ ಕೂಡಲೇ ಮಠದ ಆದಾಯಗಳನ್ನು ತಕ್ಷಣ ಬಹಿರಂಗಪಡಿಸಿದ್ದು ದುರುದ್ದೇಶದಿಂದ ಕೂಡಿದ ಕ್ರಮವಾಗಿದೆ ಮತ್ತು ಕಾನೂನು ರೀತ್ಯಾ ಕ್ರಮವಲ್ಲ ಎಂದು ಶಿರೂರು ಮಠದ ಭಕ್ತರ ಸಮಿತಿ ಹೇಳಿದೆ.ಅವರು ಗತಿಸಿ ಹೋದ ಮೇಲೆ ಮಠದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಹಾಗೂ ಸ್ವಾಮೀಜಿಗಳ ಚಾರಿತ್ರ್ಯ ಹರಣ ಮಾಡುತ್ತಿರುವ ದುಷ್ಟಕೂಟದ ವಿರುದ್ಧ ಕಠಿಣ ಕಾನೂನು ಹೋರಾಟ ನಡೆಸುವುದಾಗಿ ಭಕ್ತ ಸಮಿತಿ ತಿಳಿಸಿದೆ.

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg