-->
Home Page BJP - Pixel Ad-05.jpg
RTI Activist absconding | ಪತ್ನಿ, ಮಕ್ಕಳ ಸಹಿತ ಆರ್‌ಟಿಐ ಕಾರ್ಯಕರ್ತ ನಾಪತ್ತೆ..?

RTI Activist absconding | ಪತ್ನಿ, ಮಕ್ಕಳ ಸಹಿತ ಆರ್‌ಟಿಐ ಕಾರ್ಯಕರ್ತ ನಾಪತ್ತೆ..?

ಅಮಾಸೆಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಕಬ್ಬಿನಾಲೆ ನಿವಾಸಿ ಹಾಗೂ ಆರ್‌ಟಿಐ ಕಾರ್ಯಕರ್ತ ಅಶೋಕ್ ಶೆಟ್ಟಿಗಾರ್ ನಾಪತ್ತೆಯಾಗಿದ್ದಾರೆ. ಇವರ ಜೊತೆ ಇವರ ಪತ್ನಿ ಶ್ರೀನಿಧಿ, ಮಗ ಅಶ್ವಿನ್ ಮಗಳು ಆಶಿಕಾ ಕೂಡ ಕಣ್ಮರೆಯಾಗಿದ್ದಾರೆ. ಇವರು ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಅಶೋಕ್ ಅವರ ಅಳಿಯ ಶಿವಕುಮಾರ್ ಆರೋಪಿಸಿದ್ದಾರೆ.ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಶಿವಕುಮಾರ್, ಅಶೋಕ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ.ಅಕ್ಕಪಕ್ಕದ ಮನೆಯವರಾಗೂ, ಸಂಬಂಧಿಕರಿಗೂ, ಆತ್ಮೀಯರಿಗೂ ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಶೋಕ್ ಶೆಟ್ಟಿಗಾರ್ ಅವರು ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಒತ್ತಡದಿಂದ ಆದ ಕೃತ್ಯವೇ, ಅಲ್ಲ ಅವರ ಅಪಹರಣ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.Ads on article

Advertise in articles 1

advertising articles 2

Advertise under the article