ಬೆಂಗಳೂರು: ಇತ್ತೀಚೆಗೆ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಾಮಾಜಿಕ ಧುರೀಣ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಸಂತೋಷ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರಿಗೆ ವಾಪಸಾಗುವ ಮುನ್ನ ಬೆಂಗಳೂರು ವಿದ್ಯಾವಾಚಸ್ಪತಿ ಶ್ರೀ ಶ್ರೀ ಡಾ. ವಿಶ್ವ ಸಂತೋಷ್ ಭಾರತಿ ಸ್ವಾಮೀಜಿಯವರನ್ನು ಅವರ ಆಶ್ರಮದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ, ನಿಗಮದ ಅಧ್ಯಕ್ಷರಾಗಿ ಅಲೆಮಾರಿ ಜನಾಂಗಕ್ಕೆ ಉತ್ತಮ ಸೇವೆ ಸಲ್ಲಿಸುವಂತೆ ಗುರೂಜಿಯವರು ಉಳಿದೊಟ್ಟು ಅವರಿಗೆ ಕಿವಿಮಾತು ಹೇಳಿದರು.
ರವೀಂದ್ರ ಶೆಟ್ಟಿ ಅವರ ಪತ್ನಿ ಸೌಮ್ಯ ಶೆಟ್ಟಿ ಹಾಗೂ ಪುತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
