-->
Niharika Aravind Marriage fixed | ರಮೇಶ್ ಅರವಿಂದ್ ಪುತ್ರಿಗೆ ವಿವಾಹ ಭಾಗ್ಯ: ರಮೇಶ್ ಅಳಿಯ ಯಾರು ಗೊತ್ತೇ..?

Niharika Aravind Marriage fixed | ರಮೇಶ್ ಅರವಿಂದ್ ಪುತ್ರಿಗೆ ವಿವಾಹ ಭಾಗ್ಯ: ರಮೇಶ್ ಅಳಿಯ ಯಾರು ಗೊತ್ತೇ..?

ಸದಾ ಲವಲವಿಕೆಯ ನಟ ರಮೇಶ್ ಅರವಿಂದ್‌ ಪುತ್ರಿ ವಿವಾಹದ ಹೊಸ್ತಿಲಲ್ಲಿ ಇದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ಅವರ ಹಿರಿಯ ಮಗಳು ನಿಹಾರಿಕಾ ಅವರಿಗೆ ವಿವಾಹ ನಿಶ್ಚಯವಾಗಿದೆ. ಅಂದ ಹಾಗೆ, ಈ ಚೆಲುವೆಯ ಮದುವೆ ಇದೇ ಡಿಸೆಂಬರ್ 28ರಂದು ನಡೆಯಲಿದೆ.

ಮಗಳ ಮದುವೆಯ ಕ್ಷಣಗಣನೆಯಲ್ಲಿ ಇರುವ ಸ್ಟಾರ್ ನಟ ಈಗ ಪುತ್ರಿಯ ವಿವಾಹ ತಯಾರಿಯಲ್ಲಿ ಸಖತ್ ಬಿಜಿಯಾಗಿದ್ದಾರೆ. ಅಂದ ಹಾಗೆ, ರಮೇಶ್ ಅಳಿಯ ಯಾರು ಗೊತ್ತೇ...? ಅಕ್ಷಯ್... ಆದರೆ, ಅಕ್ಷಯ್ ಸಿನಿ ಕ್ಷೇತ್ರದವರಲ್ಲ. ಬದಲಿಗೆ ಪುತ್ರಿ ನಿಹಾರಿಕಾ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಪರಸ್ಪರ ಪ್ರೀತಿಸಿ, ಎರಡೂ ಕುಟುಂಬದವರು ಒಪ್ಪಿ ನಿಶ್ಚಯಿಸಿ ವಿವಾಹಕ್ಕೆ ಈ ಜೋಡಿ ತಯಾರಾಗಿದ್ದಾರೆ.


ಕೊರೋನಾ ಭೀತಿಯ ಮಧ್ಯೆ, ಸರ್ಕಾರಿ ನಿಯಮಗಳ ಪ್ರಕಾರ ಸರಳವಾಗಿ ಸಿಂಪಲ್ಲಾಗಿ ಈ ಮದುವೆ ನಡೆಯಲಿದೆ. ಆಪ್ತರು-ಇಷ್ಟರು ಮತ್ತು ನಿಕಟ ಸಂಬಂಧಿಗಳಿಗೆ ಮಾತ್ರ ಆಹ್ವಾನ... ಉಳಿದವರು ದೂರದಿಂದಲೇ ಹರಸಿ ಎನ್ನುತ್ತಿದೆ ಸ್ಟಾರ್ ಕುಟುಂಬ.


ಮುಂದಿನ ವರ್ಷದ ಜನವರಿಯಲ್ಲಿ ಅರತಕ್ಷತೆ ನಡೆಯಲಿದೆ. ಆ ದಿನ ಚಿತ್ರರಂಗ ಹಾಗೂ ಎಲ್ಲ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಚಿತ್ರರಂಗಕ್ಕೆ ಆಗಮಿಸಿದ ದಿನದಿಂದ ಮಾಧ್ಯಮ ಸೇರಿದಂತೆ ಕರ್ನಾಟಕದ ಜನತೆ ನೀಡಿದ ಬೆಂಬಲ, ಪ್ರೋತ್ಸಾಹ ಅಪಾರ... ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ರಮೇಶ್ ಅರವಿಂದ್ ತಮ್ಮ ಟ್ವೀಟ್ ವಿನಂತಿಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg