Mangaluru Teacher suicide | ಮಂಗಳೂರು: ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ- ನಿಜವಾದ ಕಾರಣ ಗೊತ್ತೇ..?






ಮಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಅಂಗಳದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಮೃತಪಟ್ಟ ಶಿಕ್ಷಕಿಯನ್ನು ಕುಲಶೇಖರದಲ್ಲಿ ವಾಸವಾಗಿದ್ದ ಗ್ರೆಟ್ಟಾ ಡಿಸೋಜ ಎಂದು ಗುರುತಿಸಲಾಗಿದೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.



ಲಾಕ್‌ಡೌನ್ ಬಳಿಕ ಶಿಕ್ಷಕಿ ಗ್ರೆಟ್ಟಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.  ಡಿಪ್ರೆಶ್ಶನ್‌ಗೆ ಹೋಗಿದ್ದರು ಎನ್ನಲಾಗಿದೆ. ಬೆಳಿಗ್ಗೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.



ತಾವು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಕುಟುಂಬ ಸದಸ್ಯರಲ್ಲಿ ಮತ್ತು ಆಪ್ತ ಸ್ನೇಹಿತರಲ್ಲಿ ಗ್ರೆಟ್ಟಾ ಹೇಳಿಕೊಂಡಿದ್ದರು. ಶೈಕ್ಷಣಿಕ ಮತ್ತು ಔದ್ಯೋಗಿಕ ಸಮಸ್ಯೆ ಇರಬಹುದು ಎಂದು ಹೇಳಲಾಗಿದೆ.



ಗ್ರೆಟ್ಟಾ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಂಕನಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.