-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Vacation Judge appointed | ರಜಾಕಾಲೀನ ನ್ಯಾಯಾಧೀಶರ ನೇಮಕ ಮಾಡಿ ರಾಜ್ಯ ಹೈಕೋರ್ಟ್ ಅಧಿಸೂಚನೆ

Vacation Judge appointed | ರಜಾಕಾಲೀನ ನ್ಯಾಯಾಧೀಶರ ನೇಮಕ ಮಾಡಿ ರಾಜ್ಯ ಹೈಕೋರ್ಟ್ ಅಧಿಸೂಚನೆ




ದಕ್ಷಿಣ ಕನ್ನಡ ಜಿಲ್ಲಾ ರಜಾಕಾಲೀನ ನ್ಯಾಯಾಧೀಶರನ್ನು ನೇಮಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಅಧಿಸೂಚನೆ


ಕರ್ನಾಟಕ ಸಿವಿಲ್ ಕೋರ್ಟ್ ಆ್ಯಕ್ಟ್ ನ ಸೆಕ್ಷನ್ 28 (3) (ಎ) ಮತ್ತು (ಬಿ) ಅಡಿ ಪ್ರದತ್ತ ಅಧಿಕಾರವನ್ನು ಚಲಾಯಿಸು 2020 ನೆಯ ಸಾಲಿನ ಚಳಿಗಾಲದ ರಜೆಯ ಅವಧಿಗೆ ರಜಾಕಾಲೀನ ನ್ಯಾಯಾಧೀಶರನ್ನು ನೇಮಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 16.12.2020 ರಂದು ಅಧಿಸೂಚನೆ ಹೊರಡಿಸಿದೆ.


ರಾಜ್ಯದ ಎಲ್ಲಾ ಜಿಲ್ಲೆಯ ಸಿವಿಲ್ ನ್ಯಾಯಾಲಯಗಳಿಗೆ ಡಿಸೆಂಬರ್ 24, 2020ರಂದು ಚಳಿಗಾಲದ ರಜೆ ಆರಂಭವಾಗಲಿದ್ದು ಜನವರಿ 1, 2021ರಂದು ಕೊನೆಗೊಳ್ಳಲಿದೆ.


ಹೈಕೋರ್ಟ್ ಅಧಿಸೂಚನೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ರಜಾಕಾಲದ ನ್ಯಾಯಾಧೀಶರಾಗಿ ಮ೦ಗಳೂರಿನ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ದಿನಾಂಕ 24.12.2020 ರಿಂದ 27.12.2020 ರ ವರೆಗೆ ಕಾಯ೯ನಿವ೯ಹಿಸಲಿದ್ದಾರೆ. ದಿನಾಂಕ 28.12.2020 ರಿಂದ 1.1.2021 ರ ವರೆಗೆ ಮಗಳೂರಿನ 4 ನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ರಜಾಕಾಲೀನ ನ್ಯಾಯಾಧೀಶರಾಗಿ ಕಾಯ೯ ನಿವ೯ಹಿಸಲಿದ್ದಾರೆ.



ಮಂಗಳೂರಿನ ಜಿಲ್ಲಾ ಕೇಂದ್ರದಲ್ಲಿ 6 ಜಿಲ್ಲಾ ನ್ಯಾಯಾಲಯಗಳು; 2 ಕೌಟುಂಬಿಕ ನ್ಯಾಯಾಲಯಗಳು; 1 ಕಾರ್ಮಿಕ ನ್ಯಾಯಾಲಯ; 1 ಪೋಕ್ಸೋ ವಿಶೇಷ ನ್ಯಾಯಾಲಯ; 4 ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳು; 6 ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳು; 8 ಜೆ.ಎಮ್.ಎಫ್‌. ಸಿ. ನ್ಯಾಯಾಲಯಗಳು ಇತ್ಯಾದಿ ಒಟ್ಟು 28 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. 


ಬಂಟ್ವಾಳ ಪುತ್ತೂರು ಬೆಳ್ತಂಗಡಿ ಸುಳ್ಯ ಮೂಡುಬಿದರೆ ತಾಲ್ಲೂಕುಗಳಲ್ಲಿ ಒಟ್ಟು 14

ನ್ಯಾಯಾಲಯಗಳು ಕಾಯ೯ನಿವ೯ಹಿಸುತ್ತಿವೆ.



ರಜಾ ಅವಧಿಯಲ್ಲಿ ಸಿವಿಲ್ ವಿವಾದಗಳಿಗೆ ಸಂಬಂಧಪಟ್ಟಂತೆ ಮಧ್ಯಂತರ ಆದೇಶ; ಜಪ್ತಿ ಆದೇಶ; ನಿರ್ಬಂಧಕಾಜ್ಞೆ; ಪ್ರಕರಣದ ನಡವಳಿಗೆ ತಡೆಯಾಜ್ಞೆ ಇತ್ಯಾದಿ ತುರ್ತು ಆದೇಶಗಳನ್ನು ರಜಾಕಾಲೀನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪಡೆಯಬಹುದಾಗಿದೆ.


ಚಳಿಗಾಲದ ರಜಾ ಅವಧಿಯಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಮತ್ತು ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಗಳು (MACT) ಎಂದಿನಂತೆ ಕಾರ್ಯನಿರ್ವಹಿಸಲಿವೆ.

Ads on article

Advertise in articles 1

advertising articles 2

Advertise under the article

ಸುರ