ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸರಕಾರಿ ನೌಕರರ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿರುವ ಹಾಗೂ ಶತಮಾನದ ಇತಿಹಾಸ ಹೊಂದಿರುವ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್; ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ; ಡೊಂಗರಕೇರಿ; ಮಂಗಳೂರು ಇದರ 2019-20 ನೆಯ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ20.12.2020 ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಮಾದರಿಯಲ್ಲಿ ನಡೆಯಿತು.
ಬ್ಯಾಂಕು 2019--20 ನೆಯ ಸಾಲಿಗೆ ತೆರಿಗೆಪೂರ್ವ ₹67.10 ಲಕ್ಷಗಳಷ್ಟು ಲಾಭಗಳಿಸಿದ್ದು ಆದಾಯ ತೆರಿಗೆ ಪಾವತಿಯ ನಂತರ ನಿವ್ವಳ ಲಾಭ ₹44.01 ಲಕ್ಷ ಗಳಿಸಿರುತ್ತದೆ.
ಮಹಾಸಭೆಯ ಕಾರ್ಯಸೂಚಿಗಳನ್ನು ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮೀಶ ಎನ್.ಇವರು ಮಂಡಿಸಿದರು.
ಬ್ಯಾಂಕಿನ ಸದಸ್ಯರಿಗೆ ಅನುಕೂಲವಾಗುವಂತೆ ಸದಸ್ಯರ ಜಾಮೀನು ಸಾಲಗಳ ಮೇಲಿನ ಬಡ್ಡಿಯನ್ನು 9.85% ಕ್ಕೆ ಇಳಿಕೆ ಮಾಡಿ ನಿಗದಿಪಡಿಸಲಾಗಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಪಿ. ಕೆ. ಕೃಷ್ಣ ಹಾಗೂ ನಿರ್ದೇಶಕರುಗಳಾದ ಶ್ರೀಮತಿ ತಿಲೋತ್ತಮ; ಶ್ರೀಪದ್ಮನಾಭ ಜೋಗಿ; ಶ್ರೀ ಅಕ್ಷಯ್ ಭಂಡಾರ್ಕಾರ್; ಶ್ರೀ ಬಿ.ಕೃಷ್ಣಪ್ಪ ನಾಯ್ಕ್; ಶ್ರೀ ಹೆಚ್. ಗಣೇಶ್ ರಾವ್: ಶ್ರೀ ಜಗದೀಶ್ ಪಿ.; ಶ್ರೀ ಜ್ಯೋತಿಪ್ರಕಾಶ್: ಶ್ರೀ ಎ. ಫ್ರಾಂಕಿ ಕುಟಿನ್ಹಾ; ಶ್ರೀಮತಿ ಶಶಿಕಲಾ; ಶ್ರೀ ಶಿವಾನಂದ ಎಂ. ಹಾಗೂ ಶ್ರೀಮತಿ ಸುಜಾತಾ ಉಪಸ್ಥಿತರಿದ್ದರು.

