Election Update | ಪಂಚಾಯತ್ ಸಮರ: ಬೆಳ್ತಂಗಡಿಯ ವಿವಿಧೆಡೆ ನಾಮಪತ್ರ ಸಲ್ಲಿಕೆ ಭರಾಟೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣೆಯ ಕಾವು ಏರತೊಡಗಿದೆ. ನಾಮಪತ್ರ ಸಲ್ಲಿಸುವ ಕಾರ್ಯ ಭರದಿಂದ ಸಾಗಿದ್ದು, ಬೆಳ್ತಂಗಡಿಯಲ್ಲಿ ವಿವಿಧ ಕಮ್ಯೂನಿಸ್ಟ್ ನಾಯಕರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.









ಲಾಯಿಲದಲ್ಲಿ ಎಲ್ ಮಂಜುನಾಥ್, ನಾವೂರಲ್ಲಿ ನಾರಾಯಣ‌ ಕೈಕಂಬ, ಕಳೆಂಜದಲ್ಲಿ ದೇವಕಿ ಮತ್ತು‌ ಜಯಶ್ರೀ ಹಾಗೂ ಬೆಳಾಲಲ್ಲಿ ಕುಸುಮ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.



ಹೀಗೆ, ಒಟ್ಟು 5 ಜನ ಈ ದಿನ ಗ್ರಾಮ ಪಂಚಾಯತು ಚುನಾವಣೆಯ ಅಭ್ಯರ್ಥಿಗಳಾಗಿ ಕಾರ್ಮಿಕ ನಾಯಕರುಗಳು ನಾಮಪತ್ರ ಸಲ್ಲಿಸಿದರು.



ಈ ಸಂದರ್ಭ ಹಿರಿಯ ಕಮ್ಯೂನಿಸ್ಟ್ ಮುಖಂಡ ಹಾಗೂ ನ್ಯಾಯವಾದಿ ಬಿ.ಎಂ.ಭಟ್ ಮತ್ತು ಲಕ್ಷ್ಮಣ ಗೌಡ, ಹಾಗೂ ಕಾರ್ಮಿಕ ನಾಯಕರುಗಳಾದ ರಾಮಚಂದ್ರ, ಪ್ರಭಾವತಿ, ಲಲಿತ, ವಾರಿಜ, ಗೌರಿ ಪಾಂಗಳ, ವೇದಾವತಿ ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು.



ಇನ್ನು ಆರೇಳು ಜನ‌ ನಾಮಪತ್ರ ಸಲ್ಲಿಸಲಿದ್ದು, ಭರದ ಪ್ರಚಾರ ಕಾರ್ಯ ನಡೆಯಲಿದೆ ಎಂದು ನಾಯಕರು ಹೇಳಿದ್ದಾರೆ.