ನವದೆಹಲಿ: ತೈಲೋತ್ಪನ್ನಗಳ ಬೆಲೆ ಆಕಾಶಕ್ಕೆ ನೆಗೆತ ಕಂಡಿದೆ. ಕಳೆದ ಎರಡು ವರ್ಷಗಳಲ್ಲೇ ಅತ್ಯಧಿಕ ದರವನ್ನು ಪೆಟ್ರೋಲ್ ಮತ್ತು ಡೀಸಲ್ ದಾಖಲಿಸಿದ್ದು, ಜನಸಾಮಾನ್ಯರು ಪರಿತಾಪ ಪಡುವಂತಾಗಿದೆ.
ಪೆಟ್ರೋಲ್ ಪ್ರತಿ ಲೀಟರ್‌ಗೆ 28 ಪೈಸೆ ತುಟ್ಟಿಯಾಗಿದ್ದು, ಬೆಂಗಳೂರಿನಲ್ಲಿ ಅದರ ಬೆಲೆ ಪ್ರತೀ ಲೀಟರ್‌ಗೆ ರೂ. 85.91 ದಾಖಲಿಸಿದೆ. ಡೀಸೆಲ್ ಕೂಡ ಈ ನಾಗಾಲೋಟದಲ್ಲಿ ಹಿಂದೆ ಬಿದ್ದಿಲ್ಲ. ಅದರ ಬೆಲೆ ಪ್ರತಿ ಲೀಟರ್‌ಗೆ 27 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 77.73ರಷ್ಟಿದೆ.
2018ರ ಸೆಪ್ಟೆಂಬರ್ ನಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದೇ ಅತ್ಯಧಿಕ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಕಳೆದ ನವೆಂಬರ್‌ನಿಂದೀಚೆಗೆ ಇದು 13ನೇ ಬಾರಿಯ ಬೆಲೆ ಏರಿಕೆಯಾಗಿದೆ.