-->
Cash transaction in Bank | ಬ್ಯಾಂಕಿನಲ್ಲಿ ನಗದು ವಹಿವಾಟು ಮಾಡುವವರು ಕಡ್ಡಾಯವಾಗಿ ಓದಲೇ ಬೇಕಾದ ಸುದ್ದಿ!

Cash transaction in Bank | ಬ್ಯಾಂಕಿನಲ್ಲಿ ನಗದು ವಹಿವಾಟು ಮಾಡುವವರು ಕಡ್ಡಾಯವಾಗಿ ಓದಲೇ ಬೇಕಾದ ಸುದ್ದಿ!
ನೀವು ಬ್ಯಾಂಕ್ ಯಾ ಹಣಕಾಸು ಸಂಸ್ಥೆಯಲ್ಲಿ ನಗದು ವ್ಯವಹಾರ ಮಾಡುತ್ತೀರೋ... ನಿಮ್ಮ ಉತ್ತರ ಹೌದು ಎಂದಾದರೆ ಈ ಮಾಹಿತಿ ನಿಮಗೆ ತಿಳಿದಿರಲೇ ಬೇಕು... ಮತ್ತು ಇದನ್ನು ನಿಮ್ಮ ಬಂಧು-ಬಾಂಧವರಿಗೂ ಶೇರ್ ಮಾಡಿ...


ನಗದು ವ್ಯವಹಾರದ ಬಗ್ಗೆ ಆದಾಯ ತೆರಿಗೆ ಕಾಯಿದೆಯ ನಿಯಮಗಳು ಹೀಗಿವೆ.


ಆದಾಯ ತೆರಿಗೆ ಕಾಯಿದೆಯ ಪ್ರಕರಣ 269 SS; 269 T; 269 ST ಪ್ರಕಾರ ಯಾವುದೇ ನಗದು ವ್ಯವಹಾರದ ಬಗ್ಗೆ ಈ ಕೆಳಗಿನ ಸೂಚನೆಗಳನ್ನು ಪಾಲಿಸತಕ್ಕದ್ದು. ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ 100 ಶೇಕಡಾ ಜುಲ್ಮಾನೆ ಯಾ ದಂಡ ಪಾವತಿಸತಕ್ಕದ್ದು.


1) ರಾಷ್ಟ್ರೀಕೃತ ಬ್ಯಾಂಕ್; ಶೆಡ್ಯೂಲ್ಡ್ ಬ್ಯಾಂಕ್; ಕೋ - ಆಪರೇಟಿವ್ ಬ್ಯಾಂಕ್; ಅ೦ಚೆ ಕಚೇರಿ ಹಾಗೂ ಸರಕಾರಿ ಕಚೇರಿ ಮತ್ತು ಸರಕಾರವು ಅಧಿಸೂಚನೆ ಮಾಡಿದ ಸಂಸ್ಥೆಗಳನ್ನು ಹೊರತುಪಡಿಸಿ ವ್ಯಕ್ತಿಗತ ಅಥವಾ ಇತರ ಸಂಸ್ಥೆಗಳ ಜತೆಗೆ ಮಾಡುವ ವ್ಯವಹಾರದಲ್ಲಿ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವ್ಯವಹಾರವನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.


2) ಬ್ಯಾಂಕುಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಇ೦ದ ₹ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಸಾಲವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ.


3) ಯಾವುದೇ ಸ್ಥಿರಾಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಪಟ್ಟಂತೆ ₹ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ.


4) ₹ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಠೇವಣಿಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಉದಾಹರಣೆಗೆ ಬಾಡಿಗೆ ಮುಂಗಡ ಠೇವಣಿ ಮೊತ್ತ ₹ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿದ್ದಲ್ಲಿ ನಗದಾಗಿ ಸ್ವೀಕರಿಸುವಂತಿಲ್ಲ.


5) ಬ್ಯಾಂಕುಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ; ಸಂಘ ಅಥವಾ ಸಂಸ್ಥೆಗಳಿಂದ ಪಡೆದ ಸಾಲದ ಮರುಪಾವತಿ ಸ೦ದಭ೯ದಲ್ಲಿ ರೂಪಾಯಿ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸುವಂತಿಲ್ಲ.


ಆದುದರಿಂದ ಯಾವುದೇ ವ್ಯಾಪಾರಿ ಸಂಸ್ಥೆಗಳು; ಲೇವಾದೇವಿಗಾರರು; ಪತ್ತಿನ ಸಹಕಾರ ಸಂಘಗಳು ಹಾಗೂ ಈ ಸ೦ಘ ಸಂಸ್ಥೆಗಳೊಡನೆ ವ್ಯವಹರಿಸುವ ಗ್ರಾಹಕರು ಈ ಮೇಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ತಪ್ಪಿದ್ದಲ್ಲಿ ನೂರು ಶೇಕಡಾ ಜುಲ್ಮಾನೆ ಪಾವತಿಸಲು ಬದ್ಧರಾಗಿರತಕ್ಕದ್ದು.


ಬರಹ: ಪ್ರಕಾಶ್ ನಾಯಕ್; ಅಧ್ಯಕ್ಷರು; ಗೌರ್ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್; ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ; ಡೊಂಗರಕೇರಿ; ಮ೦ಗಳೂರು

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg