ಕಾಮಗಾರಿಯ ಬಿಲ್ ಪಾವತಿ ಮಾಡದೆ ಬೇಸತ್ತ ಗುತ್ತಿಗೆದಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಅವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಲಂಚಕ್ಕೆ ಕೈಒಡ್ಡಿದ್ದ ಪುಣ್ಯಾತಿಗಿತ್ತಿ ಜೈಲು ಪಾಲಾಗಿದ್ಧಾರೆ.
ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆಯ ಬನ್ನೂರು ಪುರಸಭೆ ಮುಖ್ಯಾಧಿಕಾರಿ ಕಚೇರಿಯಲ್ಲಿ. ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಾಮಗಾರಿಯ ಬಿಲ್ 13 ಲಕ್ಷ ರೂ. ಇದರಲ್ಲಿ ತಮಗೆ ಶೇ. 3ರಷ್ಟು ಹಣ ನೀಡಬೇಕು ಎಂಬ ಬೇಡಿಕೆಯನ್ನು ಗುತ್ತಿಗೆದಾರರಾದ ಆನಂದ ಬೋವಿ ಅವರಲ್ಲಿ ಇಟ್ಟಿದ್ದರು.
ಅದರಂತೆ 25 ಸಾವಿರ ರೂ. ಸಂದಾಯ ಮಾಡುತ್ತಿದ್ದ ವೇಳೆ ಎಸಿಬಿ ಎಸ್‌ಪಿ ಸುಮಂತ್ ಪನೇಕರ್, ಡಿವೈಎಸ್‌ಪಿ ಪರಶುರಾಮಪ್ಪ, ಅಧಿಕಾರಿಗಳಾದ ಕರೀಂ ರಾವತ್, ನಿರಂಜನ್ ಅವರು ಕ್ಷಿಪ್ರ ದಾಳಿ ನಡೆಸಿದ ಆರೋಪಿ ಪುಷ್ಪಲತಾ ಅವರನ್ನು ಬಂಧಿಸಿದ್ದಾರೆ.