-->

Bantwal VSS Bank | 40 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್

Bantwal VSS Bank | 40 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್





ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ 125 ಕೋಟಿ ವ್ಯವಹಾರ ನಡೆಸಿದ್ದು, 24 ಕೋಟಿ ಠೇವಣಿ ಹೊಂದಿದೆ. 23.15 ಕೋಟಿ ಸಾಲ ನೀಡಲಾಗಿದ್ದು, 21.62 ಕೋಟಿ ಸಾಲ ಮರುಪಾವತಿ ಯಾಗಿದೆ. 40 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಅವರು ಹೇಳಿದರು.


ಅವರು ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿ.ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದರು.


ಸಂಘ ಠೇವಣಿ ಗಳಿಗೆ ಆಕರ್ಷಕ ಬಡ್ಡಿದರ , ಹಿರಿಯನಾಗರಿಕರಿಗೆ ಶೇ.0.50 ಅಧಿಕ ಬಡ್ಡಿ, ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸದಸ್ಯರಿಗೆ ವಿವಿಧ ಸಾಲಗಳನ್ನು ನೀಡಲಾಗುತ್ತಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.

ನಾನು ನಿನಗಾಗಿ ನೀನು ನನಗಾಗಿ ನಾವೆಲ್ಲರೂ ನಿಮಗಾಗಿ ಎಂಬ ತತ್ವದಡಿಯಲ್ಲಿ ಸಹಕಾರಿ ಸಂಘಗಳು ಕಾರ್ಯರೂಪಕ್ಕೆ ಬಂದಿವೆ.

ಅಮೂಲಕ ಸಾರ್ವಜನಿಕ ಸೇವೆಯಲ್ಲಿ ಮುಂದಡಿ ಇಟ್ಟಿದೆ. ಬಂಟ್ವಾಳ ವ್ಯವಸಾಯ ಸೇವ ಸಹಕಾರಿ ಸಂಘ ಕೂಡ ಕೆಲಸ ಮಾಡುತ್ತಿದೆ.


ಈ ಸಂಘ ಸದಸ್ಯರ ಹಾಗೂ ಗ್ರಾಹಕರ ಉತ್ತಮ ಪ್ರೋತ್ಸಾಹ ಸಹಕಾರದಿಂದ ಸದೃಡವಾಗಿದ್ದು ಜನರ ಅನುಕೂಲಕ್ಕೆ ಅನುಗುಣವಾಗಿ ಸಾಲದ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.


ಮಹಾಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಜಿ.ಆನಂದ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ. ಭವಾನಿಶಂಕರ್ ಅವರು ಜಿ.ಅನಂದ ಅವರ ಬಗ್ಗೆ ನುಡಿನಮನ ಸಲ್ಲಿಸಿದರು.


ಮಹಾಸಭೆಯಲ್ಲಿ ನಿರ್ದೇಶಕರುಗಳಾದ ಎಂ.ಮಹಾಬಲ ಶೆಟ್ಟಿ, ರಾಮಚಂದ್ರ ಗೌಡ, ವಿಠಲಪೂಜಾರಿ ಪುಂಡಿಬೈಲು, ವಿದ್ಯಾವತಿ ಪ್ರಮೋದ್ ಕುಮಾರ್, ಎಂ.ಕರುಣೇಂದ್ರ ಪೂಜಾರಿ, ಎ.ಲಕ್ಮೀ ವಿ.ಪ್ರಭು, ಹರೀಶ್ ಬಿ.ಸದಾಶಿವ ಶೆಣೈ, ಮನೋಹರ ಮೂಲ್ಯ, ಕೆ.ಪ್ರಕಾಶ್ , ಕೆ.ಎನ್. ಶೇಖರ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪದ್ಮನಾಭ ಬಿ.ಅವರು ಸ್ವಾಗತಿಸಿದರು.


ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ ಅವರು ವಾರ್ಷಿಕ ವರದಿ ವಾಚಿಸಿದರು. ಲೆಕ್ಕಪಾಲೆ ನತಾಶ ವಂದಿಸಿದರು. ನಾವೂರ ಬ್ಯಾಂಕ್ ಮ್ಯಾನೇಜರ್ ಹರೀಶ್ ಕಾಮಾಜೆ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article