-->
Malliaka Gilbert arrested | ಮಲೈಕಾ ಹಗರಣ: ಆರೋಪಿ ಉದ್ಯಮಿ ಗಿಲ್ಬರ್ಟ್ ಹಾಗೂ ಮೂವರ ಬಂಧನ

Malliaka Gilbert arrested | ಮಲೈಕಾ ಹಗರಣ: ಆರೋಪಿ ಉದ್ಯಮಿ ಗಿಲ್ಬರ್ಟ್ ಹಾಗೂ ಮೂವರ ಬಂಧನ

ಮಲೈಕಾ ಹಗರಣ: ಆರೋಪಿ ಉದ್ಯಮಿ ಗಿಲ್ಬರ್ಟ್ ಹಾಗೂ ಮೂವರ ಬಂಧನ

ಮುಂಬೈ (Emungaru Report) : ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಹುಕೋಟಿ ಹಗರಣದ ಆರೋಪಿ ಮಲೈಕಾ ಸಮೂಹ ಸಂಸ್ಥೆಗಳ ಉದ್ಯಮಿ ಗಿಲ್ಬರ್ಟ್ ಅವರನ್ನು ಬಂಧಿಸಲಾಗಿದೆ. ಅವರ ಜೊತೆ ಹಗರಣದಲ್ಲಿ ಭಾಗಿಯಾಗಿರುವ ಇತರ ಮೂವರನ್ನು ಬಂಧಿಸಲಾಗಿದೆ.


ಮಲೈಕಾ ಮಲ್ಟಿ ಸ್ಟೇಟ್ ಸೊಸೈಟಿ ಹಗರಣದಲ್ಲಿ ಸುಮಾರು 200ರಷ್ಟು ಬಂಡವಾಳ ಹೂಡಿಕೆದಾರರನ್ನು ವಂಚಿಸಿ 21 ಕೋಟಿ ರೂಪಾಯಿ ಪಂಗನಾಮ ಹಾಕಿದ್ದರು.


Emungaru Report


ನೊಬೆಲ್ ಮಸ್ಕರೇನಸ್, ಪ್ರಕಾಶ್ ಕೋಟ್ಯಾನ್ ಹಾಗೂ ದಿನೇಶ್ ತಿಮ್ಮಪ್ಪ ಪೂಜಾರಿ ಬಂಧಿತರು. ಈ ಮೂವರು ಮಲೈಕಾ ಸೊಸೈಟಿಯ ನಿರ್ದೇಶಕರಾಗಿದ್ಧಾರೆ.


Emungaru Report


ಮಿರಾ ಬಾಯಂದರ್ ವಾಸಾಯಿ ವಿರಾರ್ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿ ಉದ್ಯಮಿಗಳನ್ನು ಬಂಧಿಸಲಾಗಿದೆ.ಮುಂಬೈನ ಮೀರಾರೋಡ್‌ನಲ್ಲಿ ಆರಂಭವಾಗಿದ್ದ ಮಲೈಕಾ ಸೊಸೈಟಿ ಕರಾವಳಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತನ್ನ ವ್ಯಾಪಾರಿ ಮಳಿಗೆಗಳನ್ನು ಆರಂಭಿಸಿತ್ತು. ಅತಿ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಹಿರಿಯ ನಾಗರಿಕರು ಮತ್ತು ಇತರರಿಂದ ಅಪಾರ ಪ್ರಮಾಣದ ಹೂಡಿಕೆಯನ್ನು ಮಲೈಕಾ ಪಡೆದುಕೊಂಡಿತ್ತು.

ಈ ಬಗ್ಗೆ 200ಕ್ಕೂ ಅಧಿಕ ಮಂದಿ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ ತಮ್ಮ ದೂರನ್ನು ದಾಖಲಿಸಿಕೊಂಡಿದ್ದರು. 


Emungaru Reportಆರೋಪಿಗಳು ಭಾರೀ ಪ್ರಮಾಣದ ಹಣವನ್ನು ಮಲೈಕಾ ಸೊಸೈಟಿ ಹೆಸರಲ್ಲಿ ಪಡೆದುಕೊಂಡು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದರು. 

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg