-->

MRG Group Chairman Prakash Shetty | ನುಡಿದಂತೆ ನಡೆದ ಬಂಜಾರ ಪ್ರಕಾಶ್ ಶೆಟ್ಟಿ: 2ನೇ ವರ್ಷದಲ್ಲೂ ಕೋಟಿ ರೂ ಸಹಾಯ ಧನ ವಿತರಣೆ!

MRG Group Chairman Prakash Shetty | ನುಡಿದಂತೆ ನಡೆದ ಬಂಜಾರ ಪ್ರಕಾಶ್ ಶೆಟ್ಟಿ: 2ನೇ ವರ್ಷದಲ್ಲೂ ಕೋಟಿ ರೂ ಸಹಾಯ ಧನ ವಿತರಣೆ!









ಮಂಗಳೂರು: ತಾನು ಕೊಟ್ಟ ಮಾತಿನಂತೆ ಬಂಜಾರಾ ಪ್ರಕಾಶ್ ಶೆಟ್ಟಿ ನಡೆದುಕೊಂಡಿದ್ದಾರೆ. ಕಳೆದ ವರ್ಷ ಮಂಗಳೂರಿನಲ್ಲಿ ತಮ್ಮ ಪ್ರಕಾಶಾಭಿನಂದನ ಸಮಾರಂಭದಲ್ಲಿ ಒಂದು ಕೋಟಿ ರೂ. ಸಹಾಯಧನ ವಿತರಣೆ ಮಾಡಿದ್ದ ಎಂಆರ್‌ಜಿ ಸಮೂಹ ಸಂಸ್ಥೆಗಳ ಒಡೆಯ, ಉದ್ಯಮಿ ಪ್ರಕಾಶ್ ಶೆಟ್ಟಿ, ಪ್ರತಿ ವರ್ಷ ಈ ಮಹಾ ಕಾರ್ಯವನ್ನು ನಡೆಸುತ್ತೇನೆ ಎಂದು ಹೇಳಿದ್ದರು.



ಈಗ ನುಡಿದಂತೆ ನಡೆದ ಎರಡನೇ ವರ್ಷದಲ್ಲೂ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಬಡ-ಅಶಕ್ತ ಅಸಹಾಯಕರಿಗೆ ದಾನ ಮಾಡಿದ್ದಾರೆ. ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 800ಕ್ಕೂ ಅಧಿಕ ಮಂದಿಗೆ ಈ ನೆರವನ್ನು ದಯಪಾಲಿಸಿದ್ದಾರೆ. ಇದರ ಜೊತೆಗೆ 400ಕ್ಕೂ ಹೆಚ್ಚು ಮಂದಿಗೆ ವಿದ್ಯಾಭ್ಯಾಸ ಮಾಡಲು ಹಣಕಾಸಿನ ನೆರವನ್ನು ಚಾಚಿದ್ದಾರೆ.


ಮುಂದಿನ ವರ್ಷದಲ್ಲೂ ಇದೇ ರೀತಿಯ ನೆರವನ್ನು ಮುಂದುವರಿಸಿ ಸಮಾಜಕ್ಕೆ ಒಂದು ಪುಟ್ಟ ಕೊಡುಗೆ ನೀಡುತ್ತೇನೆ ಎಂದು ಗೋಲ್ಡ್‌ ಫಿಂಚ್ ಹೊಟೇಲ್‌ ಮಾಲಕ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

Watch Video Also: 




ಈ ಅರ್ಜಿಗಳನ್ನು ಪರಿಶೀಲಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಅರ್ಹವಾದ ಒಂದು ಸಮಿತಿಯನ್ನೇ ಅವರು ರೂಪಿಸಿದ್ದಾರೆ. ಮೋಹನ್ ಆಳ್ವ ಅವರೂ ಯಾರಿಗೂ ಬೇಸರವಾಗದ ರೀತಿಯಲ್ಲಿ ಅರ್ಹರಿಗೆ ಗುಲಗಂಜಿಯಷ್ಟೂ ವ್ಯತ್ಯಾಸ ಬರದ ರೀತಿಯಲ್ಲಿ ಸಮರ್ಥವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿ ಎರಡನೇ ವರ್ಷದಲ್ಲೂ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ನೆರವನ್ನು ಒದಗುವಂತೆ ಮಾಡಲು ಗುರ್ಮೆ ಸುರೇಶ್ ಶೆಟ್ಟಿ ಮುಂದಾಳ್ತನದ ಒಂದು ತಂಡವೇ ನಿಸ್ವಾರ್ಥದಿಂದ ಶ್ರಮಿಸುತ್ತಿದೆ. ಇನ್ನು, ಬಂಟರ ಯಾನೆ ನಾಡವರ ಮಾತೃ ಸಂಘ, ಉಭಯ ಜಿಲ್ಲೆಗಳ ವಿವಿಧ ಬಂಟರ ಸಂಘಟನೆಗಳು, ಜಾಗತಿಕ ಬಂಟರ ಸಂಘಟನೆಗಳ ಒಕ್ಕೂಟ, ವಿವಿಧ ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಈ ಕೈಂಕರ್ಯದಲ್ಲಿ ಪಾಲ್ಗೊಂಡು ಪ್ರಕಾಶ್ ಶೆಟ್ಟಿ ಅವರ ಕೋಟಿ ಕೊಡುಗೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ.


ಮಾಲಾಡಿ ಅಜಿತ್ ಕುಮಾರ್ ರೈ, ಸದಾನಂದ ಶೆಟ್ಟಿ ಅವರನ್ನೂ ಅವರ ಬಳಗದವರನ್ನೂ ಒಂದೇ ವೇದಿಕೆಯಲ್ಲಿ ಕಲೆ ಹಾಕಿದ್ದು ಪ್ರಕಾಶ್ ಶೆಟ್ಟಿ ಅವರ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿ.


ಇದೊಂದು ತೋರಿಕೆಯ, ಪ್ರಚಾರಕ್ಕೆ ಮಾಡುವ ಕಾರ್ಯ ಎಂದು ಹಂಗಿಸುವವರೂ ಮೂಗಿನ ಮೇಲೆ ಬೆರಳಿಡುವಂತೆ ತಮ್ಮ ಪ್ರೀತಿಯ ಮಾತುಗಳಿಂದ, ಹಣಕಾಸಿನ ಕೊಡುಗೆಯ ಮೂಲಕ ಅಶಕ್ತರತ್ತ ಕೈಚಾಚಿದ್ದಾರೆ.


ನಾಡಿನ ಹೆಮ್ಮೆಯ ಪುತ್ರ ಪ್ರಕಾಶ್ ಶೆಟ್ಟಿ ಅವರ ಈ ಮಹಾ ಕಾರ್ಯಕ್ಕೆ ಎಲ್ಲರೂ ಭೇಷ್ ಎನ್ನಲೇ ಬೇಕಾಗಿದೆ.

Ads on article

Advertise in articles 1

advertising articles 2

Advertise under the article