
Carstreet Open for vehicles | ಮಂಗಳೂರು: ರಥಬೀದಿ ಇಂದಿನಿಂದ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮುಕ್ತ
11/30/2020 07:24:00 PM
ಮಂಗಳೂರು: ಕಾಂಕ್ರೀಟೀಕರಣದಿಂದ ಸುಂದರಗೊಂಡಿರುವ ರಥಬೀದಿಯ ಹೊಸ ರಸ್ತೆಗಳು ಡಿಸೆಂಬರ್ 1ರಿಂದ ಸಂಚಾರಕ್ಕೆ ಮುಕ್ತವಾಗಲಿದೆ. ಆರಂಭಿಕವಾಗಿ ದ್ವಿಚಕ್ರ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಮಹಾಮಾಯ ದೇವಸ್ಥಾನ ರಸ್ತೆ, ಶರವು ಮಹಾಗಣಪತಿ ರಸ್ತೆ ಹಾಗೂ ಇತರ ಉಪ ರಸ್ತೆಗಳ ಲಿಂಕಿಂಗ್ ಹಾಗೂ ಅಭಿವೃದ್ಧಿ ಕೆಲಸಗಳು ಬಾಕಿ ಇದೆ.
ರಥಬೀದಿಯಿಂದ ಲೋವರ್ ಕಾರ್‌ಸ್ಟ್ರೀಟ್‌ಗೆ ಹೋಗುವ ಹಾಗೂ ಸೆಂಟ್ರಲ್ ಮಾರ್ಕೆಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ.
ಇದರಿಂದ ಕಳೆದ ನಾಲ್ಕು ತಿಂಗಳಿನಿಂದ ಸಂಕಷ್ಟಕ್ಕೊಳಗಾಗಿದ್ದ ರಥಬೀದಿಯ ವರ್ತಕರು, ವ್ಯಾಪಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.