-->
Bantwal BMS |  ಬಂಟ್ವಾಳ ಬಿಎಂಎಸ್‌ ಆಟೋ ಚಾಲಕರ ಮಹಾಸಭೆ

Bantwal BMS | ಬಂಟ್ವಾಳ ಬಿಎಂಎಸ್‌ ಆಟೋ ಚಾಲಕರ ಮಹಾಸಭೆಬಂಟ್ವಾಳ: ಬಿ.ಸಿ. ರೋಡ್ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ (ಬಿ.ಯಂ.ಎಸ್. ಬಂಟ್ವಾಳ ತಾಲೂಕು ಮೋಟಾರ್ & ಜನರಲ್ ಮಜ್ದೂರ್ ಸಂಘ ದ.ಕ.ಇದರ ಘಟಕ) ದ 32ನೇ ವಾರ್ಷಿಕ ಮಹಾ ಸಭೆಯು ನ.21 ರ ಶನಿವಾರ ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ರಾಷ್ಟ್ರೀಯ ಚಿಂತನೆಯ ಮೂಲಕ ಸಮಾಜ ಕೈಕಂರ್ಯದ ಕೆಲಸದಲ್ಲಿ ತೊಡಗಿದ ಸಂಘಟನೆಯ ಉದ್ದೇಶ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.

ಜೀವನ ಸಾಗಿಸುವುದರ ಜೊತೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆ ಎಂಬ ಭಾವನೆಯಿಂದ ರಿಕ್ಷಾ ಚಾಲಕರು ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಅವರು ಹೇಳಿದರು.

ಕಳೆದ 32 ವರ್ಷಗಳಿಂದ ದೇಶದ ಹಿತಚಿಂತನೆಯ ದೂರದೃಷ್ಟಿಯಿಂದ ಸಂಘಟನೆಯನ್ನು ಸ್ಥಾಪಿಸಿ ಅಮೂಲಕ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರುವುದು ಮಾದರಿ ಮತ್ತು ಉತ್ತಮ ಕಾರ್ಯ ಎಂದು ಅವರು ಹೇಳಿದರು.

ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ರಿಕ್ಷಾ ಚಾಲಕರ ಸಹಕಾರ ಕೂಡ ಅಗತ್ಯ ವಿದ್ದು ಕಾನೂನಿನ ಚೌಕಟ್ಟಿನ ಇತಿಮಿತಿಗಳನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.


ಬಿ. ಯಂ. ಎಸ್. ನ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಿಕ್ಷಾ ಚಾಲಕರು ಇನ್ನು ಸುಧಾರಣೆ ಆಗಬೇಕಾಗಿದೆ.

ಕಾನೂನಿಗೆ ತೊಡಕಾಗದ ರೀತಿಯಲ್ಲಿ ಶಿಸ್ತುಬದ್ಧವಾದ ನಡವಳಿಕೆ ಸಮಾಜದಲ್ಲಿ ಗುರುತಿಸಲ್ಪಡುವ ವಿಚಾರವಾಗಿದ್ದು ಗಮನಾರ್ಹ ಸಂಗತಿ ಯಾಗಿದೆ ಎಂದು ಅವರು ಹೇಳಿದರು.

ರಿಕ್ಷಾ ಚಾಲಕರ ಮಂಡಳಿ ನಿರ್ಮಾಣ ಮಾಡಬೇಕು ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಮನವಿ ಮಾಡಲಾಗಿದೆ.

ರಿಕ್ಷಾ ಚಾಲಕರಿಗೆ ವಿಶೇಷ ವಾಗಿ ಮಂಡಳಿ ರಚನೆ ಮಾಡಬೇಕು ಎಂಬುದರ ಬಗ್ಗೆ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ ಎಂದ ಅವರು ಜೊತೆಗೆ ಸರಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ಅವರು ಸಭೆಯಲ್ಲಿ ಹೇಳಿದರು.

ಸಂಘದ ಕಾನೂನು ಸಲಹೆಗಾರ ವಕೀಲರಾದ ಜಯರಾಮ ರೈ ಮಾತನಾಡಿ ರಿಕ್ಷಾ ಚಾಲಕ ಮಾಲಕರ ಸಂಘಟನೆ ಸತ್ಯದ ದ್ಯೋತಕ ವಾಗಿದೆ ಎಂದು ಅವರು ಹೇಳಿದರು.

ಸಂಘಟನೆಯಲ್ಲಿರುವ ಸದಸ್ಯರಿಗೆ ಶಕ್ತಿ ಜಾಸ್ತಿ, ಸಂಘಟನೆಯ ಮೂಲಕ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯ ವಾಗುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ರಿಕ್ಷಾ ಚಾಲಕರು ಸಂಘನೆಗೆ ಸದಸ್ಯರಾಗಿ ಸಂಘಟನಾತ್ಮಕ ಅಭಿವೃದ್ಧಿ ಗಾಗಿ ಪಣತೊಡಬೇಕು ಎಂದು ಅವರು ಹೇಳಿದರು.


ಪುರಸಭಾ ಸದಸ್ಯ ,ಸಂಘದ ಗೌರವಾಧ್ಯಕ್ಷ ಗೋವಿಂದ ಪ್ರಭು ಮಾತನಾಡಿ ರಿಕ್ಷಾ ಚಾಲಕ ಸಂಘಟನೆಯ ಮೂಲಕ ರಿಕ್ಷಾ ಚಾಲಕರ ಒಳಿತಿಗಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಸಮಾಜ ಸೇವೆ ಮಾಡಿದ ಹೆಗ್ಗಳಿಕೆ ರಿಕ್ಷಾ ಚಾಲಕರಿಗೆ ಇದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.


ಮಾಜಿ ಆಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಸಂಘದ ಅಧ್ಯಕ್ಷ ಸತೀಶ್ ಭಂಡಾರಿಬೆಟ್ಟು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.


ಉತ್ತಮ ಸಂಘಟಕನಾಗಿ ಕೆಲಸ ಮಾಡಿರುವ ಮಾಜಿ ಅಧ್ಯಕ್ಷ ಜಿಲ್ಲಾ ಉಪಾಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಅವರನ್ನು ವೇದಿಕೆಯಲ್ಲಿ ಶಾಸಕರು ಸನ್ಮಾನಿಸಿದರು.

ಸಂಘದ ಗೌರವ ಸಲಹೆಗಾರ ಸದಾನಂದ ನಾವೂರ ಸ್ವಾಗತಿಸಿ, ಸಂಘದ ಮಾಜಿ ಕಾರ್ಯದರ್ಶಿ ನಾರಾಯಣ ವಂದಿಸಿದರು.

ಸಂಘದ ಜೊತೆ ಕಾರ್ಯದರ್ಶಿ ಉಮಾಶಂಖರ್ ದಡ್ಡಲಕಾಡು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯದರ್ಶಿ ಕೃಷ್ಣ ಗೌಡ ಮಣಿಹಳ್ಳ ಲೆಕ್ಕ ಪತ್ರ ಮಂಡನೆ ಮಾಡಿದರು.


ಪ್ರತಿ ವರ್ಷ ಸರಕಾರ ಅಸಂಘಟಿತ ಕಾರ್ಮಿಕರಿಗೆ "ಶ್ರಮ ಸನ್ಮಾನ " ಮಾಡುತ್ತಿದ್ದು ಬಂಟ್ವಾಳದ 4 ಮಂದಿ ರಿಕ್ಷಾ ಚಾಲಕರು "ಶ್ರಮ ಸನ್ಮಾನ" ಕ್ಕೆ ಆಯ್ಕೆಯಾಗಿದ್ದರು. ಸಭೆಯಲ್ಲಿ ಆಯ್ಕೆಯಾದ ರಾಜೇಶ್, ಚಂದಪ್ಪ, ಕೃಷ್ಣ ಗೌಡ, ವಿಠಲ ಅವರನ್ನು ಗುರುತಿಸಲಾಯಿತು.


ಸಭೆಯಲ್ಲಿ ರಿಕ್ಷಾ ಚಾಲಕರ ಐ.ಡಿ.ಕಾರ್ಡ್ ವಿತರಣೆಯನ್ನು ಸಾಂಕೇತಿಕವಾಗಿ ಮಾಡಲಾಯಿತು. ರಿಕ್ಷಾ ಚಾಲಕರಿಗಾಗಿ ಲಕ್ಕಿ ಕೂಪನ್ ನ ಡ್ರಾ ಇದೇ ಸಂದರ್ಭದಲ್ಲಿ ನಡೆಯಿತು. ಲಕ್ಕಿ ಕೂಪನ್ ಡ್ರಾ ದ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.


Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg