-->

Bantwal NH Road | ಬಿ.ಸಿ.ರೋಡು: ಹೊಂಡಮಯ ರಸ್ತೆಗೆ ಮುಕ್ತಿ: ಟಾರ್ ಕಂಡ ಹೆದ್ದಾರಿ !

Bantwal NH Road | ಬಿ.ಸಿ.ರೋಡು: ಹೊಂಡಮಯ ರಸ್ತೆಗೆ ಮುಕ್ತಿ: ಟಾರ್ ಕಂಡ ಹೆದ್ದಾರಿ !

 ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಪೇಟೆಯಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಹಲವು ಸಮಯದಿಂದ ಕಾಡುತ್ತಿದ್ದ ಹೊಂಡಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. 



ಇಲ್ಲಿನ ಹೆದ್ದಾರಿಯಲ್ಲಿ ಒಂದು ಪದರ ಡಾಂಬರು ಹಾಕುವ ಕಾಮಗಾರಿ ನಡೆದು ಎರಡನೇ ಪದರ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯ ಹೊಂಡ ಮುಚ್ಚಿ ಸಂಪೂರ್ಣ ಡಾಂಬರೀಕರಣಗೊಳಿಸಲು ಆಗ್ರಹಿಸಿ ಇಲ್ಲಿನ ರಿಕ್ಷಾ ಚಾಲಕರು ಸಹಿತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಲವು ಬಾರಿ ಸ್ವತಃ ಶ್ರಮದಾನ ನಡೆಸಿದ್ದರು.


ಇಲ್ಲಿನ ಅವೈಜ್ಞಾನಿಕ ಮೇಲ್ಸೇತುವೆಯಿಂದಲೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಹೊಂಡಮಯ ರಸ್ತೆ ಬಗ್ಗೆ ವಾಹನ ಸವಾರರು ಮತ್ತು ಪಾದಚಾರಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.



ಈ ನಡುವೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರ ಸೂಚನೆಯಂತೆ ನಗರ ಸುಂದರೀಕರಣ ಯೋಜನೆಯಡಿ ಇಲ್ಲಿನ ಮೇಲ್ಸೇತುವೆ ಅಡಿ ಭಾಗದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಆದರೆ ದ್ವಿಚಕ್ರ ವಾಹನ ಸಹಿತ ಯಾವುದೇ ವಾಹನ ನಿಲುಗಡೆಗೆ ಎಲ್ಲಿಯೂ ಸೂಕ್ತ ವ್ಯವಸ್ಥೆಯೇ ಇಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article