-->
Alvas Naturopathy Day:  ಆಳ್ವಾಸ್‍ನಲ್ಲಿ ಮೂರನೇ ನ್ಯಾಷನಲ್ ನ್ಯಾಚುರೋಪಥಿ ದಿನ

Alvas Naturopathy Day: ಆಳ್ವಾಸ್‍ನಲ್ಲಿ ಮೂರನೇ ನ್ಯಾಷನಲ್ ನ್ಯಾಚುರೋಪಥಿ ದಿನ


ಮಿಜಾರು: ಮನುಷ್ಯನಲ್ಲಿ ಆಸೆ ಹೆಚ್ಚಾದಷ್ಟು ಒತ್ತಡ ಹೆಚ್ಚಾಗುತ್ತದೆ, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಉಡುಪಿಯ ಬೀಚ್ ಹೀಲಿಂಗ್ ಹೋಮ್ ಸಮಗ್ರ ಸ್ವಾಸ್ಥ್ಯ ಕೇಂದ್ರದ ನಿರ್ದೇಶಕ ಡಾ. ಮಹಮ್ಮದ್ ರಫೀಕ್ ಹೇಳಿದರು.


ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ ಪುಣೆ ಮತ್ತು ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈಸ್ಸ್ ಸಹಯೋಗದಲ್ಲಿ ‘’ಸಂಘಟಿತವಾಗಿ ಪ್ರಕೃತಿ ಚಿಕಿತ್ಸೆಯ ಮೂಲಕ ಚೈತನ್ಯವನ್ನು ವರ್ಧಿಸುವುದು’’ ಎಂಬ ವಿಷಯವನ್ನು ಆದರಿಸಿ ಮೂರನೇ ನ್ಯಾಷನಲ್ ನ್ಯಾಚುರೋಪಥಿ ದಿನವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಮುಹಮ್ಮದ್ ರಫೀಕ್, ಪ್ರಕೃತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಭಾರತ ಬೃಹತ್ ಕೊಡುಗೆಯನ್ನು ನೀಡಿದೆ. ಇದು ಹೆಮ್ಮೆಯ ವಿಷಯ. ಆದರೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಕಾಯಿಲೆಗಳಲ್ಲಿ ನಮ್ಮ ದೇಶವೇ ದಾಪುಗಾಲು ಇಡುತ್ತಿರುವುದು ಬೇಸರದ ಸಂಗತಿ ಎಂದರು. 


ಉತ್ಸಾಹ, ಜೀವನೋಲ್ಲಾಸವನ್ನು ಹಣಕೊಟ್ಟು ಖರೀದಿಸಲು ಸಾಧ್ಯವಿಲ್ಲ ಹಾಗೆಯೇ ಔಷಧದಿಂದ ಪಡೆಯಲು ಸಾಧ್ಯವಿಲ್ಲ, ಅವು ಕೇವಲ ನಮ್ಮ ಜೀವನ ಶೈಲಿಯಿಂದ ಮಾತ್ರ ಕಾಪಡಿಕೊಳ್ಳಲು ಸಾಧ್ಯ. ನಾವು ಯಾವಾಗ ಸಂತೋಷವಾಗಿರುತ್ತೇವೆಯೋ ಆಗ ನಮ್ಮ ಚೈತನ್ಯ ಉತ್ಸಾಹ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಯೋಗ ಧ್ಯಾನ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ‘’ಯಾವಗಾಲೂ ನಾವು ಇನ್ನೊಬ್ಬರನ್ನು ನಮ್ಮ ಉತ್ತಮ ಜೀವನ ಶೈಲಿಯಿಂದ ಆಕರ್ಷಿಸಬೇಕು ಎಂದರು. ಕೊರೊನಾ ನೇರವಾಗಿ ನಮ್ಮನ್ನು ಬದಲಾಯಿಸಲಿಲ್ಲ, ಆದರೆ ಅದು ಪ್ರತಿಯೊಬ್ಬರ ಜೀವನ ಶೈಲಿಯನ್ನೇ ಬದಲಾಯಿಸಿದೆ ಎಂದರು.ಕಾರ್ಯಕ್ರಮದಲ್ಲಿ ಆರೋಗ್ಯ ವಿಜ್ಞಾನಗಳ ವೈದ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ವೃಂದಾ ಬೇಡೆಕರ್ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾನಿಲಯಗಳ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗಿತ್ತು. ಆ ಹಿನ್ನಲೆಯಲ್ಲಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸನ ಪ್ರಾಂಶುಪಾಲೆ ಡಾ.ವನಿತಾ ಎಸ್ ಶೆಟ್ಟಿ ಮತ್ತು ಉಪಪ್ರಾಂಶುಪಾಲ ರೋಶನ್ ಪಿಂಟೋ ಉಪಸ್ಥಿತರಿದ್ದರು. ಪ್ರಾಧ್ಯಾಪಕ ನಿತೇಶ್ ಗೌಡ ನ್ಯಾಚುರೋಪಥಿ ದಿನದ ಸಲುವಾಗಿ ಮೂರು ದಿನ ನಡೆದ ವಿವಿಧ ಕಾರ್ಯಕ್ರಮಗಳ ಕುರಿತು ವರದಿ ನೀಡಿದರು.ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಡಾ. ಅರ್ಚನಾ ಪದ್ಮನಾಭ ವಂದನಾರ್ಪಣೆಗೈದರು.  

Ads on article

Advertise in articles 1

advertising articles 2

Advertise under the article