ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಕಾಫಿತೋಟದಲ್ಲಿ ನಾಪತ್ತೆ- 12ಗಂಟೆಗಳ ಬಳಿಕ ಸುರಕ್ಷಿತವಾಗಿ ಪತ್ತೆ


ಚಿಕ್ಕಮಗಳೂರು: ಆಟವಾಡುತ್ತಿದ್ದ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಮಗುವೊಂದನ್ನು 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ.

ಟೀ ಎಸ್ಟೇಟ್​ನಲ್ಲಿ ಕೆಲಸಕ್ಕೆ ಬಂದಿದ್ದ ಮಧ್ಯಪ್ರದೇಶ ಮೂಲದ ಗೋನು ಹಾಗೂ ಸೋನು ದಂಪತಿಯ 1.5 ವರ್ಷದ ಗಂಡು ಮಗು ಗುರುವಾರ ಸಂಜೆ ನಾಪತ್ತೆಯಾಗಿತ್ತು. ಮೂಡಿಗೆರೆ ಸಿಪಿಐ, ಬಾಳೂರು ಪಿಎಸ್​​ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಗುವನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ.

ಮೂವರು ಮಕ್ಕಳೊಂದಿಗೆ ಆಡವಾಡುತ್ತಾ ಕಾಫಿ ತೋಟಕ್ಕೆ ಬಂದಿದ್ದ ಮಗು ಏಕಾಏಕಿ ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ಬಳಿಕ ಮಗು ಸುರಕ್ಷಿತವಾಗಿ ಪತ್ತೆಯಾಗಿದೆ‌. ಶೋಧ ನಡೆಸುವವರ ಕಣ್ಣಿಗೆ ಬೀಳುವಾಗ ಮಗು ಮಲಗಿತ್ತು ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ ಕಳೆದುಹೋಗಿದ್ದ ಮಗುವನ್ನು ಸತತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಂದು ಬೆಳಗ್ಗೆ ತೋಟದಲ್ಲಿ ಪತ್ತೆಮಾಡಿ, ಹೆತ್ತವರ ಮಡಿಲಿಗೆ ಮರಳಿ ಸೇರಿಸಿದ್ದಾರೆ. 

BREAKING NEWS
Loading latest news...
Join our WhatsApp Channel Powered By : Online Pudu