70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್- ಬಾಲಕಿಯರು ಚಾಂಪಿಯನ್ಸ್ ಹಾಗೂ ಬಾಲಕರು ರನ್ನರ್ಸ್



ಮೂಡುಬಿದಿರೆ: ತಮಿಳುನಾಡಿನ ಈರೋಡಿನಲ್ಲಿ ಮುಕ್ತಾಯಗೊಂಡ 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಬಾಲಕಿಯರನ್ನೊಳಗೊಂಡ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಬಾಲಕರ ತಂಡ ರನ್ರ‍್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಪೈನಲ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ ಕಳೆದ ಬಾರಿಯ ಚಾಂಪಿಯನ್  ತಮಿಳುನಾಡು ವಿರುದ್ಧ 35-25, 35-31 ನೇರ ಸೆಟ್‌ಗಳಿಂದ  ಗೆದ್ದು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ,  ಬಾಲಕರ ತಂಡ  ತಮಿಳುನಾಡು  ವಿರುದ್ಧ 26-35, 27-35  ನೇರ ಸೆಟ್‌ಗಳಿಂದ ಪರಾಭವಗೊಂಡು ರನ್ನರ್  ಅಪ್ ಪ್ರಶಸ್ತಿ ಪಡೆದುಕೊಂಡಿತು. ಕರ್ನಾಟಕ ತಂಡದಲ್ಲಿ ಬಾಲಕಿಯರ ವಿಭಾಗದಲ್ಲಿ ಆರು ಮಂದಿ ಹಾಗೂ ಬಾಲಕರ ವಿಭಾಗದಲ್ಲಿ ನಾಲ್ಕು ಮಂದಿ ಆಳ್ವಾಸ್ ಕ್ರೀಡಾಪಟುಗಳು ಪಾಲ್ಗೊಂಡು ಶ್ರೇಷ್ಠ ಸಾಧನೆ ಮೆರೆಯಲು ಸಹಕರಿಸಿದರು.  

ವಿಜೇತ ಕರ್ನಾಟಕ ತಂಡದ ಪರವಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಚರಣ್ ಹಾಗೂ ಬಾಲಕಿಯರ ತಂಡದಲ್ಲಿ ರಾಜ್ಯ ತಂಡದ ನಾಯಕಿಯಾಗಿದ್ದ ಆಳ್ವಾಸ್‌ನ ಗೀತಾ ಹಾಗೂ ಶುಭಶ್ರೀ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪಡೆದುಕೊಂಡರು. ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮೆರೆದ ಕರ್ನಾಟಕ ತಂಡಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu